ಹಗುರ, ಸುರಕ್ಷಿತ ಹಾಗೂ ನಾಲ್ಕೇ ಗಂಟೆಗಳಲ್ಲಿ ವಿತರಣೆಯ ಗುರಿ ಹೊಂದಿರುವ ಭಾರತ್ ಪೆಟ್ರೋಲಿಯಂ ಸಂಸ್ಥೆ ಬಿಡುಗಡೆ ಮಾಡಿರುವ ಹೊಸ ತಲೆಮಾರಿನ ಫೈಬರ್ ಕಾಂಪೊಸಿಟ್ ಎಲ್.ಪಿ.ಜಿ. ಸಿಲಿಂಡರ್ ಭಾರತ್ ಗ್ಯಾಸ್ ಲೈಟ್ ಜಿಪ್ ಬಂಟ್ವಾಳದ ಭದ್ರಾ ಗ್ಯಾಸ್ ಏಜನ್ಸೀಸ್ ನಲ್ಲಿ ಶುಕ್ರವಾರ ಬಿಡುಗಡೆಗೊಂಡು, ವಿತರಣೆ ಆರಂಭಿಸಿತು.

ಮಾರುಕಟ್ಟೆ ಪ್ರಬಂಧಕ ದರ್ಶಿತ್ ಮಾಲವೀಯ ಮಾತನಾಡಿ, ಸುರಕ್ಷತಾ ದೃಷ್ಟಿಯಿಂದ ಹಾಗೂ ಆಧುನಿಕ ವ್ಯವಸ್ಥೆ ಹಿನ್ನೆಲೆ ಈ ಸಿಲಿಂಡರ್ ಉಪಕಾರಿ ಎಂದರು.
ಬಿಪಿಸಿಎಲ್ ಚೀಫ್ ಮ್ಯಾನೇಜರ್ ಶರತ್ ಕಾಂಬ್ಲೆ ಮಾತನಾಡಿ, ಇದು ಭವಿಷ್ಯದ ಸಿಲಿಂಡರ್ ಆಗಿದೆ ಎಂದರು.

ಬಂಟ್ವಾಳದ ಕಾರ್ಮಿಕ ಇಲಾಖೆ ನಿರೀಕ್ಷಕಿ ಲವೀನಾ ಡಿಸೋಜ ಉದ್ಘಾಟಿಸಿ ಮಾತನಾಡಿ, ಹೊಸತನದೊಂದಿಗೆ ಉದ್ಯಮಗಳು ಮುನ್ನಡೆಯುವ ಸಂದರ್ಭ, ಕಾರ್ಮಿಕರಿಗೂ ಉದ್ಯೋಗಗಳು ದೊರಕುತ್ತದೆ ಎಂದು ಶುಭ ಹಾರೈಸಿದರು.
ರೈ ಸ್ಪೈಸಿಸ್ ಮಾಲೀಕರಾದ ದಿವ್ಯಾ ರೈ, ದೀಪಾ ಗೋಲ್ಡ್ ಜ್ಯುವೆಲರ್ಸ್ ಮಾಲೀಕರಾದ ದೀಪಾ ನರೇಶ್ ಬಾಳಿಗಾ ಶುಭ ಹಾರೈಸಿದರು.
ಭಾರತ್ ಪೆಟ್ರೋಲಿಯಂ ಸಂಸ್ಥೆಯ ಟೆರಿಟರಿ ಮ್ಯಾನೇಜರ್ ಸಂದೀಪ್ ಕುಮಾರ್ ರೈನಾ ಮಾತನಾಡಿ, ಇದು ಭವಿಷ್ಯದ ಅನಿಲ ಸಿಲಿಂಡರ್ ಆಗಲಿದ್ದು, ಬಂಟ್ವಾಳಕ್ಕೆ ಪರಿಚಯಿಸಿದ ಭದ್ರಾ ಗ್ಯಾಸ್ ನ ಮಂಜುನಾಥ್ ಆಚಾರ್ಯ ಅವರ ಪ್ರಯತ್ನ ಶ್ಲಾಘನೀಯವಾಗಿದ್ದು, ಇಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿರುವುದು ಗಮನಾರ್ಹ ಎಂದರು. ಸಾಂಪ್ರದಾಯಿಕ ಗ್ಯಾಸ್ ಸಿಲಿಂಡರ್ ಗಳಿಗಿಂತ ಇದು ಹೆಚ್ಚು ಸುರಕ್ಷಿತ ಹಾಗೂ ಸುಲಭವಾಗಿ ಮಹಿಳೆಯರು ಬಳಸಬಹುದಾದ ಆಧುನಿಕ ವಿನ್ಯಾಸಗಳನ್ನು ಒಳಗೊಂಡಿದೆ ಎಂದವರು ಹೇಳಿದರು.

ಭದ್ರಾ ಗ್ಯಾಸ್ ಮಾಲೀಕರಾದ ಮಂಜುನಾಥ ಆಚಾರ್ಯ, ಆಶಾಲತಾಬಾಯಿ, ಮಧ್ವ ಎಂ. ಆಚಾರ್ಯ ಉಪಸ್ಥಿತರಿದ್ದರು.
ಪಾಲುದಾರರಾದ ಮೇಘಾ ಎಂ. ಆಚಾರ್ಯ ಸ್ವಾಗತಿಸಿದರು. ಮಾಲ್ಸಿ ಎಂ. ಆಚಾರ್ಯ ವಂದಿಸಿದರು. ವಸಂತ ಪ್ರಭು ಪ್ರಾರ್ಥನೆ ನೆರವೇರಿಸಿದರು. ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು.

ಈ ಸಿಲಿಂಡರ್ ಅನ್ನು ಮಹಿಳೆಯರೇ ವಿತರಿಸಲಿದ್ದು, ಇದಕ್ಕಾಗಿಯೇ ಭದ್ರಾ ಸಂಸ್ಥೆಯಿಂದ ವಾಹನಕ್ಕೆ ಚಾಲನೆ ದೊರಕಿತು. ಮನೆ ಮನೆ ವಿತರಣೆ ನಿರ್ವಹಿಸುವ ಆಟೊ ಚಾಲಕಿ ವನಿತಾ ಆರಂಭದಲ್ಲಿ ಅನಿಲದ ಜಾಡಿಗಳನ್ನು ಹೊತ್ತ ಮಿನಿ ಟೆಂಪೊ ಚಲಾಯಿಸಿದರು.



Be the first to comment on "ಗರಿಷ್ಠ ಸುರಕ್ಷೆ, ನಾಲ್ಕೇ ಗಂಟೆಗಳಲ್ಲಿ ವಿತರಣೆ: ಬಂಟ್ವಾಳದಲ್ಲಿ ಭಾರತ್ ಗ್ಯಾಸ್ ಲೈಟ್ ವಿತರಣೆ ಆರಂಭ"