
ಬಂಟ್ವಾಳ: ಬಂಟ್ವಾಳದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವಾರ್ಷಿಕ ಮಹಾಸಭೆ ನಡೆಯಿತು.
ಶಿಕ್ಷಕರ ಸಹಕಾರ ಮತ್ತು ಪೋಷಕರ ಪ್ರೋತ್ಸಾಹವೂ ಈ ಚಟುವಟಿಕೆಗಳ ಯಶಸ್ಸಿಗೆ ಪ್ರಮುಖವಾಗಿದೆ. ಎಂದು ಈ ವೇಳೆ ಸ್ಕೌಟ್ ಗೈಡ್ಸ್ ಸ್ಥಳೀಯ ಸಂಸ್ಥೆ ಪಾಣೆಮಂಗಳೂರು ಗೌರವ ಕಾರ್ಯಾಧ್ಯಕ್ಷ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪ್ಪ ಬಿ ಎಲ್ ಹೇಳಿದರು.

ಸಂಚಾಲಕರು, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಕಿ ಆಶಾ ನಾಯಕ್ ಹಾಗೂ 2025-26 ರ ಸಾಲಿನ ದ.ಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಕೆ ಎನ್ ಅವರನ್ನು ಸನ್ಮಾನಿಸಲಾಯಿತು.

ಸ್ಕೌಟ್ಸ್ ಗೈಡ್ಸ್ ನ ಜಿಲ್ಲಾ ಕಮಿಷನರ್ ಬಿ ಎಂ ತುಂಬೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತೀಮ್ ಕುಮಾರ್ ಭಾಗವಹಿಸಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪುನಶ್ಚೇತನ ತರಬೇತಿ ನೀಡಿದರು.

ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಗೌರವ ಉಪಾಧ್ಯಕ್ಷರಾದ ಪಿ ಗೋವಿಂದ ಪೈ, ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸ್ಥೆ ಗೌರವ ಉಪಾಧ್ಯಕ್ಷ ಎಂ ನರೇಂದ್ರನಾಥ ಕುಡ್ವ, ಎಸ್‌ಎಲ್‌ಪಿ ವಿದ್ಯಾಲಯ ಪಾಣಿ ಮಂಗಳೂರುನ ಮುಖ್ಯ ಶಿಕ್ಷಕಿ ಶ್ವೇತಾ ಕಾಮತ್, ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಉಪಸ್ಥಿತರಿದ್ದರು.
ಸ್ಕೌಟ್ ಗೈಡ್ ಸ್ಥಳೀಯ ಸಂಸ್ಥೆ ಪಾಣಿಮಂಗಳೂರು ವ್ಯಾಪ್ತಿಯ ಶಾಲೆಗಳ ಕಬ್ ಬುಲ್ ಬುಲ್ ಸ್ಕೌಟ್ ಮತ್ತು ಗೈಡ್ಸ್ ತರಬೇತಿ ಪಡೆದ ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು. ಕಾರ್ಯದರ್ಶಿ ಮಜಿ ಶಾಲಾ ಶಿಕ್ಷಕಿ ಸ್ಕೌಟ್ ಮಾಸ್ಟರ್ ಸಂಗೀತ ಶರ್ಮಾ ಸ್ವಾಗತಿಸಿ ವರದಿ ವಾಚಿಸಿದರು, ಕೋಶಾಧಿಕಾರಿ ನಿವೃತ್ತ ಶಿಕ್ಷಕ ಕಬ್ ಮಾಸ್ಟರ್ ಎಡಿಸಿ ಕೆ ಜಯಂತ ನಾಯಕ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಜೊತೆ ಕಾರ್ಯದರ್ಶಿ ಶ್ರೀರಾಮ ಕಲ್ಲಡ್ಕ ಶಾಲೆಯ ಸ್ಕೌಟರ್ ಎಚ್. ಕೊಟ್ರಪ್ಪ ವಂದಿಸಿದರು.


Be the first to comment on "ಸ್ಕೌಟ್ ಮತ್ತು ಗೈಡ್ ಸಂಸ್ಥೆ ಬಂಟ್ವಾಳ ವಾರ್ಷಿಕ ಮಹಾಸಭೆ"