ಪುತ್ತೂರು: ಜೆಸಿಐ ವಲಯ 15ರ ಸಾಧನಾ ಶ್ರೀ ಪ್ರಶಸ್ತಿಗೆ ಟಿವಿ ಕ್ಲಿನಿಕ್ ಮಾಲಕ, ಪುತ್ತೂರು ಜೆಸಿಐ ಸದಸ್ಯ ಸತ್ಯಶಂಕರ್ ಆಯ್ಕೆಯಾಗಿದ್ದಾರೆ. ಮಡಂತ್ಯಾರಿನ ಕಲಾ ಸಭಾಂಗಣದಲ್ಲಿ ಆ. 23ರಂದು ನಡೆಯುವ ಮೃದಿನಿ ವ್ಯವಹಾರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಐಟಿಸಿ ಡಿಪ್ಲೋಮಾ ವ್ಯಾಸಂಗದ ಬಳಿಕ 2000ದಲ್ಲಿ ಟೆಲಿವಿಷನ್ ಕ್ಷೇತ್ರಕ್ಕೆ ಕಾಲಿಡುತ್ತಾರೆ. ತಾಂತ್ರಿಕ ನೈಪುಣ್ಯ, ಕಠಿಣ ಪರಿಶ್ರಮ ಹಾಗೂ ಉದ್ಯಮಶೀಲತಾ ದೃಷ್ಟಿಕೋನದಿಂದ 2010ರಲ್ಲಿ ಟಿವಿ ಕ್ಲಿನಿಕ್ ಆರಂಭಿಸಿದರು. 2008ರಲ್ಲಿ ಕೇಶವ ಪ್ರಸಾದ್ ಮುಳಿಯ ಹಾಗೂ ತನ್ನ ಸಹೋದರ ಪಶುಪತಿ ಶರ್ಮಾ ಅವರ ಪ್ರೋತ್ಸಾಹದಿಂದ ಜೆಸಿಐ ಚಳವಳಿಗೆ ಸೇರಿಕೊಂಡರು. ಇವರು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ಸದಸ್ಯರೂ ಹೌದು.
ವೃತ್ತಿ ಹಾಗೂ ಸಾಮಾಜಿಕವಾಗಿ ಹಲವಾಗಿ ಸಾಧನೆಗಳಿಗೆ ಸಾಕ್ಷಿಯಾಗಿರುವ ಸತ್ಯಶಂಕರ್ ಅವರು ಜೆಸಿಐ ಫೌಂಡೇಷನ್’ಗೆ ದೇಣಿಗೆಯನ್ನು ನೀಡಿ ಜೆ.ಎಫ್.ಡಿ. ಪದವಿ ಗಳಿಸಿದ್ದಾರೆ. ಇವರು ಕುಳಮರ್ವ ವೆಂಕಟರಮಣ ಭಟ್ ಹಾಗೂ ರತ್ನಾವತಿ ದಂಪತಿ ಪುತ್ರ. ಸತ್ಯಶಂಕರ್ ಅವರ ಸಾಧನೆಗೆ ಅವರ ಪತ್ನಿ ಸ್ಮಿತಾ ಶಂಕರ್ ಹೆಗಲು ನೀಡಿದ್ದಾರೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಟಿವಿ ಕ್ಲಿನಿಕ್ ಮಾಲಕ ಸತ್ಯಶಂಕರ್ ಅವರಿಗೆ ಜೆಸಿಐ ವಲಯ 15ರ ಸಾಧನಾ ಶ್ರೀ ಪ್ರಶಸ್ತಿ | ಮಡಂತ್ಯಾರಿನಲ್ಲಿ ನಡೆಯುವ ಮೃದಿನಿ ವ್ಯವಹಾರ ಸಮ್ಮೇಳನದಲ್ಲಿ ಪ್ರದಾನ"
Be the first to comment on "ಟಿವಿ ಕ್ಲಿನಿಕ್ ಮಾಲಕ ಸತ್ಯಶಂಕರ್ ಅವರಿಗೆ ಜೆಸಿಐ ವಲಯ 15ರ ಸಾಧನಾ ಶ್ರೀ ಪ್ರಶಸ್ತಿ | ಮಡಂತ್ಯಾರಿನಲ್ಲಿ ನಡೆಯುವ ಮೃದಿನಿ ವ್ಯವಹಾರ ಸಮ್ಮೇಳನದಲ್ಲಿ ಪ್ರದಾನ"