
ಜೈಭೀಮ್ ಬ್ರದರ್ಸ್ ವಗ್ಗ ಹಾಗೂ ಅಲೇರಿ ಶ್ರೀ ಸತ್ಯಸಾರಮಾನಿ ಕಾನದ ಕಟದ ಮೂಲ ಕ್ಷೇತ್ರ ಗ್ರಾಮ ಸಮಿತಿ ವಗ್ಗ ವಲಯ ಅಶ್ರಯದಲ್ಲಿ ಕೆಸರ್ದ ಕಂಡೊಡು ಗೊಬ್ಬುದ ಗಮ್ಮತ್ ಕಾರ್ಯಕ್ರಮ ವಗ್ಗ ಅಜ್ಜಿಬಾಕಿಮಾರು ಗದ್ದೆಯಲ್ಲಿ ನಡೆಯಿತು.

ಅಲೇರಿ ಶ್ರೀ ಸತ್ಯಸಾರಮಾನಿ ಕಾನದ ಕಟದ ದೈವಗಳ ಶಕ್ತಿ, ಕಲೆ,ಕೃಷಿ ಹಾಗೂ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಶಿಕ್ಷಣ ಸಂಘಟನೆ ಹೋರಾಟದ ಚಿಂತನೆಯ ಹಾದಿಯಲ್ಲಿ ನಡೆದ ಕಾರ್ಯಕ್ರಮವನ್ನು ಜೈಭೀಮ್ ಬ್ರದರ್ಸ್ ನ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ಬುದ್ಧಗೀತೆಯನ್ನು ಹಾಡುವ ಮೂಲಕ ಪ್ರಾರಂಭಿಸಿದರು.
ಕಾರ್ತಿಕ್ ವಗ್ಗ ಸ್ವಾಗತಿಸಿದರು ಬಹುಜನ ಸಮಾಜ ಪಾರ್ಟಿಯ ಕಾಂತಪ್ಪ ಆಲಂಗಾರ್ ಉದ್ಘಾಟಿಸಿದರು.

ಶ್ರೀ ಸತ್ಯಸಾರಮಾನಿ ಕಾನದ ಕಟದ ದೈವ ಹಾಗೂ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅತಿಥಿಗಣ್ಯರು ಪುಷ್ಪಾರ್ಚನೆ ಮಾಡಿದರು
ಜೈಭೀಮ್ ಬ್ರದರ್ಸ್ ನ ಅಧ್ಯಕ್ಷ ವಸಂತ್ ಅಧ್ಯಕ್ಷತೆ ವಹಿಸಿದ್ದರು. ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಸ್ಥಾಪಕಾದ್ಯಕ್ಷರಾದ ಸೇಸಪ್ಪ ಬೆದ್ರಕಾಡು ಮಾತನಾಡಿ ಅಂಬೇಡ್ಕರ್ ಚಿಂತನೆ ಹೋರಾಟದ ಹಾದಿಯ ಸಂಘಟನೆಯನ್ನು ಕಟ್ಟಬೇಕು ಎಂದರು,
ಕಾಂತಪ್ಪ ಅಲಂಗಾರ್ ಮಾತನಾಡಿ ಶ್ರೀ ಕಾನದ ಕಟದ ದೈವಗಳ ಬದುಕಿನ ಚರಿತ್ರೆ ಕಲೆ, ಶಕ್ತಿ, ಕೃಷಿಪ್ರಾತಿನಿದ್ಯತೆ ಹಾಗೂ ಅಂಬೇಡ್ಕರವರ ಆಲೋಚನೆ ಜ್ಞಾನ ಪ್ರತಿಯೊಬ್ಬರಲ್ಲಿಯೂ ಬೆಳೆಯಬೇಕು ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತುಂಗಪ್ಪ ಬಂಗೇರ ಮಾತನಾಡಿ, ಸಮಜದಲ್ಲಿ ಅಸ್ಪೃಶ್ಯತೆ ಅಸಮಾನತೆ ಹೋಗಲಾಡಿಸಿ ಸಮ ಸಮಾಜದ ನಿರ್ಮಾಣ ಹಾಗೂ ಸಾಮಾಜಿಕ ಬದುಕು ಕ್ರೀಡಾತ್ಮಕವಾಗಿಯೂ ಒಗ್ಗಟ್ಟನ್ನು ಕಟ್ಟಲು ಸಾಧ್ಯ ಎಂದರು.
ಅತಿಥಿಗಳಾಗಿ ಪ್ರಮುಖರಾದ ಪಿಯುಸ್ ರೋಡ್ರಿಗಸ್, ಶೇಖರ್ ಕುಕ್ಕೇಡಿ, ಗಣೇಶ್ ಪ್ರಸಾದ್ ಮೂಡಬಿದ್ರೆ, ಕೃಷ್ಣಪ್ಪ ಜಾವಳಿ, ಮೋಹನ್ ಚೆಂಡ್ತಿಮಾರ್, ಶ್ರೀನಿವಾಸ್ ಅರ್ಬಿಗುಡ್ಡೆ, ಅಣ್ಣು ಖಂಡಿಗ, ಜಿನಮ್ಮ ಅತ್ತಿಕಾರಬೈಲು ,ವೀರೇಂದ್ರ ಅಮೀನ್ ವಗ್ಗ, ರಾಜ ಚೆಂಡ್ತಿಮಾರ್, ಮಂಜುನಾಥ್ ಮಾಡ, ಮಾಧವ ಕಡೇಶಿವಾಲಯ ತ್ರಿವಳಿ ನಿರೂಪಕರಾದ ಚಂದ್ರಪ್ಪ ಮಾಸ್ಟರ್, ರಾಜೀವ್ ಕಕ್ಕೆಪದವು, ಪ್ರವೀಣ್ ಸೂರ್ಯ ಹೊಸಂಗಡಿ, ಸುರೇಶ್ ಪೂಜಾರಿ ಹರೀಶ್ ಪಂಡಿಜೆ, ಸೋಮಪ್ಪ ಅಲಂಗಾರ್, ಬಾಬು ರಜನಿ,ಲೋಕಯ್ಯ ಗಾಡಿಪಲ್ಕೆ, ವೆಂಕಟೇಶ್ ಕೃಷ್ಣಪುರ, ಪ್ರೀತಮ್ ರಾಜ್ ಪಲ್ಲಮಜಲು, ರಾಮ ಚೆಂಡ್ತಿಮಾರ್, ಮೋಹನ್ ಬಾಳಿಕೆ ಆಗಮಿಸಿದ್ದರು.

ಸಮಾರೋಪದ ಅಧ್ಯಕ್ಷತೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ವಹಿಸಿದ್ದರು. ಅಲೇರಿ ಸತ್ಯಸಾರಮಾನಿ ದೈವಸ್ಥಾನದ ಅಭಿವೃದ್ಧಿಯ ಬಗ್ಗೆ ಹಾಗೂ ಕೃಷಿ ಪ್ರದಾನ ಕೆಸರ್ದ ಗದ್ದೆ ಹಾಗೂ ಮೂಲನಿವಾಸಿಗಳಿಗೂ ಇರುವ ಐತಿಹಾಸಿಕ ಸಂಬಂಧದವನ್ನು ವಿವರಿಸಿ ಶ್ಲಾಘಿಸಿದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಬೇಬಿಕುಂದರ್ ಶುಭ ಹಾರೈಸಿದರು. ಕರಾಟೆ ಸಾಧಕಿ ತೃಷಾ, ಕಾರ್ಯಕ್ರಮಕ್ಕೆ ಸ್ಥಳವಕಾಶ ನೀಡಿದ ಕೂಸಪ್ಪ ಪೂಜಾರಿ, ನಿರೂಪಕರಾದ ಚಂದ್ರಪ್ಪ ಮಾಸ್ಟರ್ ಮದ್ದಡ್ಕ, ಅಲೇರಿ ಶ್ರೀ ಸತ್ಯಸಾರಮನಿ ವಗ್ಗ ವಲಯ ಗೌರವಾಧ್ಯಕ್ಷ ಬಿಪಿನ್ ರಾಜಪಲ್ಕೆ ಮತ್ತು ಸಾಧಕರನ್ನು ಸನ್ಮಾಸಲಾಯಿತು. ಚಂದ್ರಪ್ಪ ಮಾಸ್ಟರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಚಂದ್ರಹಾಸ್ ಅರ್ಬಿಗುಡ್ಡೆ ಧನ್ಯವಾದ ನೀಡಿದರು.


Be the first to comment on "ವಗ್ಗ: ಕೆಸರ್ದ ಕಂಡೊಡು ಗೊಬ್ಬುದ ಗಮ್ಮತ್ತ್ ಕಾರ್ಯಕ್ರಮ"