
ಬಂಟ್ವಾಳ: ಬಂಟ್ವಾಳದ ಬಿಜೆಪಿ ಕಚೇರಿಯಲ್ಲಿ ಬಂಟ್ವಾಳ ಮಂಡಲದ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀಧರ್ ಶೆಟ್ಟಿ ಪುಲಿಂಚ ಪ್ರಸ್ತಾವನೆಯನ್ನು ಮಾಡಿದರು. ಜಿಲ್ಲಾ ಸಹ ಸಂಚಾಲಕರಾದ ಪ್ರಮೋದ್ ಪೂಜಾರಿ ಕೆರ್ವಾಶೆ ಕಾನೂನು ಪ್ರಕೋಷ್ಠದ ಮುಂದಿನ ಕಾರ್ಯ ಯೋಜನೆಯ ಬಗ್ಗೆ ವಿವರಿಸಿದರು. ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಮಾತನಾಡಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾನೂನು ಪ್ರಕೋಷ್ಠದ ಅವಶ್ಯಕತೆ ಬಗ್ಗೆ ಮಾಹಿತಿ ನೀಡಿದರು.

ಬಿಜೆಪಿ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಸಂಘಟನಾತ್ಮಕ ಕಾರ್ಯಗಳ ಬಗ್ಗೆ ವಿವರಿಸಿದರು. ಬಿಜೆಪಿ ಬಂಟ್ವಾಳ ಮಂಡಲದ ಕಾನೂನು ಪ್ರಕೋಷ್ಠದ ಸಂಚಾಲಕ ವೀರೇಂದ್ರ ಎಂ ಸಿದ್ದಕಟ್ಟೆ ಬಂಟ್ವಾಳ ಮಂಡಲದ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣೆ ಮಾಡಿದರು. ಸದಸ್ಯರಾಗಿ ಶ್ರೀಕೃಷ್ಣ, ಪ್ರಜ್ವಲ್ ಆಚಾರ್ಯ, ನಿತಿನ್, ಶಿವಾನಿ ಮತ್ತು ಶ್ರುತಿ ಕೆ ನಾವಿಲ ಅವರನ್ನು ಘೋಷಿಸಲಾಯಿತು. ಈ ಸಂದರ್ಭ ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ಪ್ರಭಾರಿ ಪುರಂದರ ಶೆಟ್ಟಿ ಬಳ್ಯ ಮತ್ತು ಕಾನೂನು ಪ್ರಕೋಷ್ಠ ಬಂಟ್ವಾಳ ಮಂಡಲದ ಸಹ ಸಂಚಾಲಕ ರಮೇಶ್ ಕೆ ಮಠದಮೂಲೆ ಉಪಸ್ಥಿತರಿದ್ದರು. ವೀರೇಂದ್ರ ಎಂ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಕೃಷ್ಣ ವಂದಿಸಿದರು.


Be the first to comment on "ಬಿಜೆಪಿ ಬಂಟ್ವಾಳ ಮಂಡಲದ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣೆ"