
ಬಂಟ್ವಾಳ: ಮುಡಿಪುವಿನ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ವತಿಯಿಂದ ಬಂಟ್ವಾಳ ತಾಲೂಕು ತುಳು ಶಿವಳ್ಳಿ ಸೇವಾ ಟ್ರಸ್ಟ್ ಸಹಭಾಗಿತ್ವದಲ್ಲಿ ವಿಶ್ವಭಾರತಿ ಯಕ್ಷ ಸಂಭ್ರಮ ಕಾರ್ಯಕ್ರಮ ಯಕ್ಷಗಾನ ತಾಳಮದ್ದಳೆ ಸಪ್ತಾಹ ಜುಲೈ 20ರಿಂದ 26ರವರೆಗೆ ಬಿ.ಸಿ.ರೋಡಿನ ತುಳು ಶಿವಳ್ಳಿ ಸಭಾಭವನದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಸಂಚಾಲಕ ಪ್ರಶಾಂತ್ ಹೊಳ್ಳ ತಿಳಿಸಿದ್ದಾರೆ.

ಪ್ರತಿದಿನ ಸಂಜೆ 4 ಗಂಟೆಗೆ ಆಹ್ವಾನಿತ ಅತಿಥಿಗಳ ಭಾಗವಹಿಸುವಿಕೆಯಲ್ಲಿ ಸಭಾ ಕಾರ್ಯಕ್ರಮ ಬಳಿಕ 4.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. 20ರಂದು ಸರಯೂ ಯಕ್ಷಬಳಗ ಕೋಡಿಕಲ್ ಅವರಿಂದ ಮಹಾಶೂರ ಭೌಮಾಸುರ, 21ರಂದು ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಕಲಾ ಸಂಘದಿಂದ ಭೀಷ್ಮ ಪ್ರತಿಜ್ಞೆ, 22ರಂದು ಕೊಂಚಾಡಿ ಯಕ್ಷಸ್ನೇಹ ಕಲಾ ಪ್ರತಿಷ್ಠಾನದಿಂದ ಶಾಂಭವಿ ವಿಜಯ, 23ರಂದು ಬಾಯಾರುಪದವು ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾ ಸಂಘದಿಂದ ದಕ್ಷಯಜ್ಞ, 24ರಂದು ಮಂಜೇಶ್ವರ ಮೀಯಪದವು ಶ್ರೀ ಗುರುನರಸಿಂಹ ಯಕ್ಷ ಬಳಗದಿಂದ ಮೋಕ್ಷ ಸಂಗ್ರಾಮ, 25ರಂದು ಮುಡಿಪು ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ಬಳಗದಿಂದ ಅತಿಕಾಯ ಮೋಕ್ಷ ತಾಳಮದ್ದಳೆ ನಡೆಯಲಿದೆ. 26ರಂದು ಭಾನುವಾರ ಸಂಜೆ 4ಕ್ಕೆ ಸಮಾರೋಪ ನಡೆಯಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ, ಮಾನವ ಹಕ್ಕು ಆಯೋಗ ಅಧ್ಯಕ್ಷ ಡಾ. ಟಿ.ಶಾಮ ಭಟ್ ಸಹಿತ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭ



ಡಾ. ಸೋಮಶೇಖರ ಮಯ್ಯ ಮತ್ತು ಮಾಧವ ನಾವಡ ವರ್ಕಾಡಿ ಅವರಿಗೆ ಗೌರವ ಪುರಸ್ಕಾರ ನೀಡಲಾಗುವುದು. ಬಳಿಕ ಯಕ್ಷಗಾನ ತಾಳಮದ್ದಳೆ ಅಂಗದ ಸಂಧಾನ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ನಡೆಯಲಿದೆ ಎಂದು ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ಸಂಚಾಲಕ ಪ್ರಶಾಂತ್ ಹೊಳ್ಳ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.



Be the first to comment on "ಜುಲೈ 20ರಿಂದ 26ರವರೆಗೆ ವಿಶ್ವಭಾರತಿ ಯಕ್ಷ ಸಂಭ್ರಮ – Details"