ಶಿವಪ್ರಸಾದ್ ಶೆಟ್ಟಿ
ಬಂಟ್ವಾಳ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ 2026ರಿಂದ 2031ನೇ ಅವಧಿಗೆ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು. ಚುನಾವಣಾಧಿಕಾರಿ ಉಮಾನಾಥ ರೈ ಮೇರಾವು ಪ್ರಕ್ರಿಯೆ ನಡೆಸಿಕೊಟ್ಟರು. ಜಿಲ್ಲಾಧ್ಯಕ್ಷರಾಗಿ ಶಿವಪ್ರಸಾದ್ ಶೆಟ್ಟಿ ಆಯ್ಕೆಗೊಂಡರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಿಮಲ್ ಕುಮಾರ್ ಕೆ.ಎ, ಕೋಶಾಧಿಕಾರಿಯಾಗಿ ಸುರೇಶ್ ಎಂ, ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್, ಗೌರವಾಧ್ಯಕ್ಷರಾಗಿ ವಾನಿ, ಉಪಾಧ್ಯಕ್ಷೆಯಾಗಿ ಆರತಿ ಕುಮಾರಿ, ಸಹಕಾರ್ಯದರ್ಶಿಯಾಗಿ ಸಂದೇಶ್ ಎಂ.ಎಸ್, ಹೇಮಲತಾ ಪಿ, ಸಂಘಟನಾ ಕಾರ್ಯದರ್ಶಿಯಾಗಿ ಜಯಂತ ಕೆ, ನೀತಾ ಗಟ್ಟಿ ಆಯ್ಕೆಗೊಂಡರು.
| ಪದ್ಯಾಣ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ದೃಢಕಲಶಾಭಿಷೇಕ (more…)