ಜಿಲ್ಲಾ ಸುದ್ದಿ

ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ‘ಟೆಕ್-ಹೊರೈಜಾನ್ 2026’ ಅಂತರಾಷ್ಟಿಯ ಸಮ್ಮೇಳನ

ಮಂಗಳೂರು ನಗರದ ಶ್ರೀನಿವಾಸ ವಿಶ್ವವಿದ್ಯಾಲಯದ ‘ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಸೈನ್ಸ್ ಆಂಡ್ ಇನ್ ಫರ್ಮೇಶನ್ ಸೈನ್ಸ್’ ಕಾಲೇಜಿನಲ್ಲಿ ‘ಟೆಕ್-ಹೊರೈಜಾನ್ 2026’ ಎನ್ನುವ ಅಂತರಾಷ್ಟ್ರೀಯ  ಮಟ್ಟದ  ಸಮ್ಮೇಳನ ಜೂನ್ 19 & 20 ರಂದು ನಡೆಯಿತು.

VNR GOLD

ಸಮ್ಮೇಳನದ ಅಧ್ಯಕ್ಷತೆ ವಹಿಸಿದ,  ಆಡಳಿತ ಮಂಡಳಿಯ ಸದಸ್ಯರಾದ ಪ್ರೊ| ಇಂಜಿನಿಯರ್ ಎ. ಮಿತ್ರಾ ಎಸ್ ರಾವ್ ಅವರು, ಇಂತಹ ಸಮ್ಮೇಳನಗಳು ನಾವು ನಮ್ಮ ಸಂಶೋಧನಾ ಚಿಂತನೆಗಳನ್ನು ಜಗತ್ತಿನ ಮುಂದೆ ತೆರೆದಿಡಲು ಸಹಕಾರಿಯಾಗಿದೆ ಎಂದರು.

ವಿಶೇಷ ಅತಿಥಿಯಾದ ಇ.ಜಿ.ಡಿ.ಕೆ ಇಂಡಿಯಾ ಖಾಸಗಿ ಸಂಸ್ಥೆಯ ಪ್ರಧಾನ ದತ್ತಾಂಶ ವಿಜ್ಞಾನಿ ಮತ್ತು ಎಐ ಸೆಂಟರ್ ಆಫ್ ಎಕ್ಸೆಲೆನ್ಸ್ ಮುಖ್ಯಸ್ತರೂ ಆಗಿರುವ ಡಾ. ಪ್ರಖ್ಯಾತ್ ರೈ ಮಾತನಾಡಿ, ಕೃತಕ ಬುದ್ದಿಮತ್ತೆಯ ನಿಖರತೆಯನ್ನು ಉನ್ನತೀಕರಿಸುವಲ್ಲಿ  ಸಂಶೋಧನೆಗಳ ಪಾತ್ರ ಪ್ರಮುಖವಾಗಿದೆ ಎಂದರು.

ಜಾಹೀರಾತು

ಆಡಳಿತ ಮಂಡಳಿಯ ಸದಸ್ಯರಾದ ಕು| ಎ. ಮೇಘನಾ ಎಸ್ ರಾವ್ ಮಾತನಾಡಿ ಕೃತಕ ಬುದ್ದಿಮತ್ತೆಯ ಬಳಕೆಯಲ್ಲಿ ನೈತಿಕ ಪರಿಗಣನೆಯ ಅಗತ್ಯ ಬಹಳಷ್ಟಿದೆ ಎಂದು ಹೇಳಿದರು.

ಸಂಸ್ಥೆಯ ಡೀನ್ ಡಾ. ಸುಬ್ರಹ್ಮಣ್ಯ ಭಟ್  ಪ್ರಾಸ್ತಾವಿಕ ಭಾಷಣದಲ್ಲಿ, ಕೃತಕ ಬುದ್ದಿಮತ್ತೆಯ ಹೆಚ್ಚಿನ ಲಾಭ ಕೇವಲ ಕಾರ್ಪೊರೇಟ್ ಸಂಸ್ಥೆಗಳು ಮಾತ್ರ ಪಡೆಯುತ್ತಿದ್ದು, ಇದು ಸಾಮಾನ್ಯ ಪ್ರಜೆಗಳಿಗೂ ಲಭಿಸುವ ನಿಟ್ಟಿನಲ್ಲಿ ಸಂಶೋಧನೆಗಳು ಆಗಬೇಕಿದೆ ಎಂದು ಆಶಿಸಿದರು.

ಸಮ್ಮೇಳನದಲ್ಲಿ ದೇಶದ ವಿವಿಧ ಮೂಲೆಗಳ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಂದ ಆಯ್ದ 86 ಸಂಶೋದನಾ ಪ್ರಬಂಧಗಳನ್ನು ಮಂಡಿಸಲಾಯಿತು. ಪ್ರೊ| ಶ್ಯಾಮಲಾ ಸನಿಲ್ ಸ್ವಾಗತಿಸಿದರು. ಸಹ ಸಂಚಾಲಕರಾದ ಪ್ರೊ| ಅಭಿಷೇಕ್ ವರ್ನೇಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಚಾಲಕಿಯಾದ ಡಾ| ಸೌಮ್ಯಾ ಎಸ್ ಅವರು ವಂದಿಸಿದರು. ಪ್ರೊ| ರಿಯಾ ಉಪ್ಪಳ ಮತ್ತು ಪ್ರೊ| ರಾಧಿಕಾ ಮಲ್ಯ ಅವರು ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.