ಬಂಟ್ವಾಳ

BANTWAL: ಬೇಕಾಗಿದ್ದಾರೆ – 8 ಅಂಗನವಾಡಿ ಕಾರ್ಯಕರ್ತೆ ಮತ್ತು 12 ಅಂಗನವಾಡಿ ಸಹಾಯಕಿಯರು

ಬಂಟ್ವಾಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಪುರಸಭೆ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ 8 ಅಂಗನವಾಡಿ ಕಾರ್ಯಕರ್ತೆ ಮತ್ತು 12 ಅಂಗನವಾಡಿ ಸಹಾಯಕಿಯರ ಹುದ್ದೆ ಭರ್ತಿಗೆ ಆಫ್ ಲೈನ್ ಮೂಲಕ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯು ತಾತ್ಕಾಲಿಕ ಮತ್ತು ಗೌರವಧನ ಆಧರಿತವಾಗಿದ್ದು, ಆಯ್ಕೆಯಾದವರು ಗೌರವಧನ ಆಧಾರದ ಮೇಲೆ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.

ಕುಕ್ಕಿಪಾಡಿಯ ಮಾಡಾಮೆ, ಪುರಸಭೆ ವ್ಯಾಪ್ತಿಯ ಬಿ. ಮೂಡ ವಾರ್ಡ್ ನಂಬರ್ 11 ರ ಗೂಡಿನ ಬಳಿ, ಅಮ್ಮುಂಜೆಯ ಧಾರೆಕಟ್ಟೆ ಹಾಗೂ ಪಾಂಡೀಲು, ಕರಿಯುಂಗಳದ ಗುಂಡಿಕುಮೇರು , ಸಜೀಪನಡುವಿನ ಸಜೀಪನಡುಪೇಟೆ, ಸರಪಾಡಿಯ ಕುಂಟಾಲಪಲ್ಕೆ, ಪುರಸಭೆ ಬಿಮೂಡ ವಾರ್ಡ್ ನಂಬರ್ 10 -ಕಾಮಾಜೆ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರು ಬೇಕಾಗಿದ್ದಾರೆ.

ಬಡಗಕಜೆಕಾರು ನ ಹಾರ್ದೋಟ್ಟು, ಪುರಸಭೆ ಬಿ.ಕಸಬ ವಾರ್ಡ್ ನಂಬರ್ 1 ರ ಲೊರಟ್ಟೋಪದವು, ಬಾಳ್ತಿಲದ ಸಣ್ಣಕುಕ್ಕು,ಕಳ್ಳಿಗೆ ಯ ಪಾದೆ ಹಾಗೂ ತೊಡಂಬಿಲ, ಪುರಸಭೆ ಬಿ.ಮೂಡ ವಾರ್ಡ್ ನಂಬರ್ 15 ಶಾಂತಿಯಂಗಡಿ, ನರಿಂಗಾನದ ಚೆನ್ನಕಟ್ಟೆ, ಮೇರ ಮಜಲು ಬಡ್ಡೂರು, ಪುರಸಭೆ ಬಿಕಸಬಾ ವಾರ್ಡ್ ನಂಬರ್ 05 ರ ಹೊಸ್ಮಾರು, ಮಣಿನಾಲ್ಕೂರು ನ ನಡುಮೊಗರು, ಪುರಸಭೆ ಬಿ ಮೂಡ ವಾರ್ಡ್ ನಂಬರ್ 13ರ ಕೈ ಕುಂಜೆ , ಕುಕ್ಕಿಪಾಡಿ ಸಿದ್ದಕಟ್ಟೆ ಚರ್ಚ್ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರು ಬೇಕಾಗಿದ್ದಾರೆ.

ಜಾಹೀರಾತು
VNR GOLD

ಹುದ್ದೆಗಳಿಗೆ ಅರ್ಜಿಗಳನ್ನು ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಕೈಕುಂಜೆ ಜೋಡು ಮಾರ್ಗ ಅಂಚೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹತ್ತಿರ ಇಲ್ಲಿಗೆ ಕಳುಹಿಸಬೇಕು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.