ಬಂಟ್ವಾಳ: ಬಂಟ್ವಾಳದ ಭಂಡಾರಿಬೆಟ್ಟು ಸಮೀಪ ಸರಣಿ ಅಪಘಾತ ಶುಕ್ರವಾರ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾಗಿಲ್ಲ.
ಭಂಡಾರಿಬೆಟ್ಟುವಿನಲ್ಲಿ ಪಿಕಪ್ ವಾಹನ ಹಾಗೂ ಅದರ ಹಿಂದಿದ್ದ ಕಾರು ರಸ್ತೆಯ ಬದಿಯಲ್ಲಿ ಸಂಚರಿಸುತ್ತಿದ್ದು, ಆಂಬುಲೆನ್ಸ್ ಸೈರನ್ ಮೊಳಗಿಸಿಕೊಂಡು ಬಂದ ವೇಳೆ ವಾಹನಗಳ ವೇಗ ತಗ್ಗಿಸಿದ್ದರು.
ಇದೇ ವೇಳೆ ಹಿಂದಿನಿಂದ ಬಂದ ಸರಕಾರಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಅದರ ಪರಿಣಾಮ, ಮುಂದಿದ್ದ ಪಿಕಪ್ ಗೆ ಡಿಕ್ಕಿಯಾಗಿದೆ. ಘಟನೆಯಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಬಂಟ್ವಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.