
ಅಂಡರ್ ಆರ್ಮ್ ಕ್ರಿಕೆಟ್ ಕಾಂಗ್ರೆಸ್ ಟ್ರೋಪಿ–2026 ಪಂದ್ಯಾಕೂಟ ಮೇ 16 ಮತ್ತು 17ರಂದು ನಂದಾವರ ಶಾರದ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯಾಕೂಟದಲ್ಲಿ ಪ್ರಥಮ ಬಹುಮಾನವಾಗಿ 5 ಲಕ್ಷ ರೂ ನಗದು ಹಾಗೂ ದ್ವಿತೀಯ ಸ್ಥಾನಕ್ಕೆ 2.5 ಲಕ್ಷ ರೂ ನಗದು ಬಹುಮಾನ ಜೊತೆಗೆ ಗಾಜು-ಬೆಳ್ಳಿ ಲೇಪಿತ ಆಕರ್ಷಕ ಟ್ರೋಫಿಯನ್ನು ನೀಡಲಾಗುತ್ತಿದೆ. ಕರಾವಳಿ ಭಾಗದ ಎಂಟು ಪ್ರತಿಷ್ಠಿತ ತಂಡಗಳು ಹಾಗೂ ಸ್ಥಳೀಯ 16 ತಂಡಗಳು ಭಾಗವಹಿಸಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಅಂಪೈರ್‌ಗಳು, ಸಿಬ್ಬಂದಿಗಳು, ತಾಂತ್ರಿಕ ತಂಡ ಹಾಗೂ ಇನ್ನಿತರ ಕಾರ್ಯಕರ್ತರಿಗೆ ಸಮವಸ್ತ್ರ ವ್ಯವಸ್ಥೆ ಮಾಡಲಾಗಿದ್ದು, ಪಂದ್ಯಾಕೂಟವನ್ನು ವೃತ್ತಿಪರ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ, ಬೆಳಕು, ಧ್ವನಿ ವ್ಯವಸ್ಥೆ ಹಾಗೂ ಪ್ರೇಕ್ಷಕರ ಆಸನ ವ್ಯವಸ್ಥೆಯಲ್ಲೂ ವಿಶೇಷ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ಬಿ.ರಮನಾಥ ರೈ,ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರೂ ಹಾಗೂ ವಿಧಾನಪರಿಷತ್ ಶಾಸಕರಾದ ಡಾ.ಮಂಜುನಾಥ ಭಂಡಾರಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್,ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮಾರ್ಗದರ್ಶನ ಮತ್ತು ಸಹಕಾರದಲ್ಲಿ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಪ್ರಮುಖ ಗಣ್ಯರು ಈ ಸಂದರ್ಭ ಅತಿಥಿಗಳಾಗಿ ಆಗಮಿಸಲಿದ್ದಾರೆ.


Be the first to comment on "ಮೇ 16, 17: ಪಾಣೆಮಂಗಳೂರು ಶಾರದಾ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಟ್ರೋಪಿ–2026"