
ಬಂಟ್ವಾಳ -ಮೂಡಬಿದ್ರೆ ಲೋಕೋಪಯೋಗಿ ರಾಜ್ಯ ಹೆದ್ದಾರಿಯ ತಿರುವುಗಳಲ್ಲಿ ಮರದ ರೆಂಬೆ, ಬಳ್ಳಿಗಳು ಹಾಗೂ ಚರಂಡಿ ಹೂಳೆತ್ತದೆ ಇರುವುದರಿಂದ ಪ್ರಯಾಣಿಕರಿಗೆ ಅಪಾಯದ ಸನ್ನಿವೇಶ ಉಂಟಾಗಿದ್ದು, ಕ್ರಮಕ್ಕೆ ಲೋಕೋಪಯೋಗಿ ಇಲಾಖೆಯನ್ನು ಸ್ಥಳೀಯ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಒತ್ತಾಯಿಸಿದೆ.

ಮರದ ರೆಂಬೆಗಳನ್ನು ಹಾಗೂ ಬಳ್ಳಿಗಳನ್ನು ತೆರವು ಗೊಳಿಸಿ, ರಸ್ತೆ ಬದಿಯ ಚರಂಡಿ ರಿಪೇರಿ ಮಾಡುವಂತೆ ಬಂಟ್ವಾಳ ಉಪ ವಿಭಾಗ ಲೋಕೋಪಯೋಗಿ ಇಲಾಖೆಗೆ ರೋಟರಿ ಕ್ಲಬ್ ಬಂಟ್ವಾಳ ಲೋರಟ್ಟೋ ಹಿಲ್ಸ್ ವತಿಯಿಂದ ಮನವಿ ನೀಡಲಾಯಿತು.
ಬಂಟ್ವಾಳ -ಮೂಡಬಿದ್ರೆ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಓಡಾಟ ನಡೆಸುತ್ತಿವೆ. ಈ ರಸ್ತೆಯು ಕೆಲವು ತಿರುವುಗಳನ್ನು ಹೊಂದಿದ್ದು ಹಲವು ಕಡೆಗಳಲ್ಲಿ ಮರದ ಕೊಂಬೆಗಳು, ಬಳ್ಳಿ ರಸ್ತೆಗೆ ಬಾಗಿಕೊಂಡಿದ್ದು ಎದುರು ಸೈಡ್ ನಿಂದ ಬರುವ ವಾಹನಗಳು ಒಂದಕೊಂದು ಕಾಣದಂತೆ ಇದೆ. ರಸ್ತೆಯ ಎರಡು ಬದಿಯಲ್ಲಿ ಇರುವ ಚರದಿಗಳಲ್ಲಿ ಮಣ್ಣು ಮತ್ತು ಕಸಕಡ್ಡಿಗಳು ತುಂಬಿ ಕೊಂಡಿದ್ದು ಮಳೆ ನೀರು ರಸ್ತೆಯಲ್ಲಿಯೇ ಹರಿದು ಹೋಗುತ್ತಿದೆ. ಹಿಂದೆ ಮಳೆಗಾಲ ಸಮಯದಲ್ಲಿ ಚರಂಡಿಯ ಮಣ್ಣು ತೆಗೆದು ಅಲ್ಲಿಯೇ ರಸ್ತೆಯ ಮೇಲೆ ಹಾಕುತ್ತಿರುವುದರಿಂದ ಮತ್ತೇ ಆ ಮಣ್ಣು ಮಳೆಯ ನೀರಿಗೆ ಚರಂಡಿ ಸೇರುತ್ತಿದೆ. ಆದುದರಿಂದ ಮಳೆಗಾಲ ಪ್ರಾರಂಭ ಮುಂಚೆಯೇ ರಸ್ತೆ ತಿರುವುಗಳಲ್ಲಿ ಇರುವ ಮರದ ಕೊಂಬೆ, ಬಳ್ಳಿಗಳನ್ನು ಕಡಿದು, ಚರಂಡಿ ರಿಪೇರಿ ಮಾಡಿ ವಾಹನ ಸವಾರರಿಗೆ ಸುಗಮವಾಗಿ ಹಾಗೂ ನಿರ್ಭಯವಾಗಿ ಸಂಚಾರ ಮಾಡುವರೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ಮನವಿಯಲ್ಲಿ ತಿಳಿಸಲಾಗಿದೆ ರೋಟರಿ ಕ್ಲಬ್ ಬಂಟ್ವಾಳ ಲೋರೆಟ್ಟೋ ಹಿಲ್ಸ್ ಅಧ್ಯಕ್ಷ ವಿಜಯ ಫೇರ್ನಂಡಿಸ್, ನಿಕಟ ಪೂರ್ವ ಅಧ್ಯಕ್ಷರಾದ ಸುರೇಶ ಶೆಟ್ಟಿ ಸಿದ್ದಕಟ್ಟೆ,ರಾಮಚಂದ್ರ ಶೆಟ್ಟಿಗಾರ್,ಆಂಟನಿ ಸ್ವೀಕ್ವೆರಾ, ಐವನ್ ಮೆನೇಜಸ್, ಪ್ರೀತಮ್ ರೋಡ್ರಿಗಸ್, ರುಡಾಲ್ಪ್ ದೇವಾನಂದ ಮತ್ತಿತರರು ಉಪಸ್ಥಿತರಿದ್ದರು


Be the first to comment on "Bantwal: ಬಂಟ್ವಾಳ ಮೂಡುಬಿದಿರೆ ರಸ್ತೆ ಬದಿ ಅಪಾಯಕಾರಿ ಸನ್ನಿವೇಶ: ಕ್ರಮಕ್ಕೆ ಮನವಿ"