ಸಾಲೆತ್ತೂರು ಸಮೀಪದ ಕಾಡುಮಠ ಗಾಣದಮನೆ ಎಂಬಲ್ಲಿ ರೂ ೨೫ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಗುಡಿಯಲ್ಲಿ ’ಗಾಣದ ದೇವಿ ಪ್ರತಿಷ್ಠೆ’ ನೆರವೇರಿತು.
ಸುಮಾರು ೮೦೦ ವರ್ಷಗಳ ಹಿನ್ನೆಲೆ ಹೊಂದಿರುವ ಈ ಆರಾಧನೆಯು ಗಾಣದ ವೃತ್ತಿಯ ಜೊತೆಗೆ ನಶಿಸಿ ಹೋಗಿತ್ತು. ಇದೀಗ ಹಲಸಿನ ಮರದಿಂದ ಗಾಣದ ಮಾದರಿ ಪೀಠ ಕಾಷ್ಠಶಿಲ್ಪಿ ಮೂಲಕ ರಚಿಸಲಾಗಿದೆ ಎಂದು ಆಡಳಿತ ಟ್ರಸ್ಟಿ ಸುಬ್ರಹ್ಮಣ್ಯ ಬಂಗೇರ ಕಾಡುಮಠ ತಿಳಿಸಿದ್ದಾರೆ.
ದೈವಜ್ಞ ಹರಿಪ್ರಸಾದ್ ಪಂಡಿತ್ ಅವರು ಆರೂಢ ಪ್ರಶ್ನೆಯಲ್ಲಿ ತಿಳಿಸಿದಂತೆ ತಂತ್ರಿ ಭಾರ್ಗವ ಉಡುಪ ಇವರ ಮಾರ್ಗದರ್ಶನದಲ್ಲಿ ಪುತ್ತೂರು ದೇವದಾಸ್ ಪಾಟಾಳಿ ಅವರು ’ಗಾಣದ ದೇವಿ’ ಪ್ರತಿಷ್ಠೆ ಸಹಿತ ವಿಶೇಷ ಪೂಜೆ ನೆರವೇರಿಸಿದರು.ಸಂಜೆ ಧೂಮಾವತಿ ಬಂಟ ಮೈಸಂದಾಯ ದೈವಸ್ಥಾನ ಬಳಿ ದೈವಗಳಿಗೆ ನೇಮೋತ್ಸವ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಟ್ರಸ್ಟಿ ದೇವಪ್ಪ ಬಂಗೇರ, ಪ್ರಮುಖರಾದ ಪ್ರಮೀಳ ಅಣ್ಣಪ್ಪ ಬಂಗೇರ, ಸತೀಶ್ ಕಾಡುಮಠ, ವಿಶ್ವನಾಥ ಪುತ್ತೂರು, ಸಂಧ್ಯಾ ವೆಂಕಟೇಶ್, ಮಾಧವ ಎಸ್.ಮಾವೆ, ನಾಗರಾಜ್ ಬಿಕರ್ನಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.