ಪ್ರಮುಖ ಸುದ್ದಿಗಳು

ಪುತ್ತೂರಿಗೆ ಬರಲಿದೆ ದೇಶದ ಲೇಟೆಸ್ಟ್ ಜ್ಯುವೆಲ್ಲರಿ ಟ್ರೆಂಡ್ ಮತ್ತು ವಿಶೇಷ ವಿನ್ಯಾಸಗಳು

ಮುಂಬೈನ IIJSನಲ್ಲಿ ಈಶ್ವರ ಮುರಳಿ…..ಪುತ್ತೂರಿಗೆ ಬರಲಿದೆ ದೇಶದ ಲೇಟೆಸ್ಟ್ ಜ್ಯುವೆಲ್ಲರಿ ಟ್ರೆಂಡ್ ಮತ್ತು ವಿಶೇಷ ವಿನ್ಯಾಸಗಳು

ಪುತ್ತೂರು: ಪುತ್ತೂರು ಹಾಗೂ ಕರಾವಳಿ ಭಾಗದ ಮಹಿಳೆಯರ ಆಭರಣ ಸಂಪ್ರದಾಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಕರಿಮಣಿ ಸರಗಳಲ್ಲಿ ಹೊಸತನ, ವೈವಿಧ್ಯತೆ ಹಾಗೂ ಇತ್ತೀಚಿನ ವಿನ್ಯಾಸಗಳನ್ನು ಪರಿಚಯಿಸುವ ಉದ್ದೇಶದಿಂದ ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನ ಮಾಲಕ ಈಶ್ವರ ಮುರಳಿ ಅವರು ಮುಂಬೈನಲ್ಲಿ ನಡೆದ ಪ್ರತಿಷ್ಠಿತ IIJS Bharat Premiere 2026 ಅಂತರರಾಷ್ಟ್ರೀಯ ಜ್ಯುವೆಲ್ಲರಿ ಪ್ರದರ್ಶನದಲ್ಲಿ ಭಾಗವಹಿಸಿದರು.

OPTIC WORLD

ಪ್ರದರ್ಶನದಲ್ಲಿ ದೇಶದ ಪ್ರಮುಖ ಆಭರಣ ತಯಾರಕರು ಹಾಗೂ ವಿನ್ಯಾಸಕಾರರು ಪರಿಚಯಿಸಿದ ಹೊಸ ಮಾದರಿಯ ಕರಿಮಣಿ ಸರಗಳು, ಸಾಂಪ್ರದಾಯಿಕ ಮತ್ತು ಆಧುನಿಕ ಮಂಗಳಸೂತ್ರ ವಿನ್ಯಾಸಗಳು, ವಿಭಿನ್ನ ಪೆಂಡೆಂಟ್ ಮಾದರಿಗಳು, ವಧುವಿನ ಆಭರಣಗಳು ಹಾಗೂ ಇತ್ತೀಚಿನ ಚಿನ್ನಾಭರಣ ಟ್ರೆಂಡ್‌ಗಳನ್ನು ಅವರು ವಿಶೇಷವಾಗಿ ಅವಲೋಕಿಸಿದರು.

ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕರಿಮಣಿ ಶೈಲಿಯ ವೈಶಿಷ್ಟ್ಯವನ್ನು ಉಳಿಸಿಕೊಂಡು, ಅದಕ್ಕೆ ಆಧುನಿಕ ವಿನ್ಯಾಸದ ಸ್ಪರ್ಶ ನೀಡುವ ಹಾಗೂ ವಿಭಿನ್ನ ವಯೋಮಾನದ ಮಹಿಳೆಯರ ಅಭಿರುಚಿಗೆ ತಕ್ಕಂತೆ ಹೆಚ್ಚಿನ ವಿನ್ಯಾಸ ಮತ್ತು ವೈವಿಧ್ಯಮಯ ಆಯ್ಕೆಗಳನ್ನು ಪುತ್ತೂರಿನಲ್ಲಿಯೇ ಒದಗಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ.

ಜಾಹೀರಾತು

ಇದರೊಂದಿಗೆ ನೆಕ್ಲೆಸ್, ಚೈನ್, ಬಳೆ, ಉಂಗುರ, ಬ್ರೈಡಲ್ ಜ್ಯುವೆಲ್ಲರಿ ಸೇರಿದಂತೆ ಚಿನ್ನಾಭರಣ ಕ್ಷೇತ್ರದ ಇತ್ತೀಚಿನ ವಿನ್ಯಾಸಗಳನ್ನೂ ಪರಿಶೀಲಿಸಲಾಗಿದ್ದು, ಮುಂಬೈನ ಪ್ರಮುಖ ಜ್ಯುವೆಲ್ಲರಿ ಟ್ರೆಂಡ್‌ಗಳು ಮತ್ತು ಆಯ್ದ ವಿಶೇಷ ವಿನ್ಯಾಸಗಳನ್ನು ಪುತ್ತೂರಿನ ಗ್ರಾಹಕರಿಗೆ ಪರಿಚಯಿಸುವ ನಿಟ್ಟಿನಲ್ಲಿ ಹೊಸ ಸಂಗ್ರಹಗಳನ್ನು ತರಲು ಡಿ. ಶಿವ ಭಟ್ ಜ್ಯುವೆಲ್ಲರ್ಸ್ ಮುಂದಾಗಿದೆ.

ಪಾರಂಪರಿಕ ಕರಿಮಣಿ ಸರಗಳ ವೈವಿಧ್ಯಮಯ ಸಂಗ್ರಹದೊಂದಿಗೆ ಹೊಸ ತಲೆಮಾರಿನ ವಿನ್ಯಾಸಗಳನ್ನೂ ಪರಿಚಯಿಸುವ ಮೂಲಕ “ಪುತ್ತೂರಿನ ಕರಿಮಣಿ ಸ್ಪೆಷಲಿಸ್ಟ್” ಎಂಬ ವಿಶೇಷತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ಕಾರ್ಯೋನ್ಮುಖವಾಗಿದೆ

ಮುಂಬೈನ IIJSನಲ್ಲಿ ಈಶ್ವರ ಮುರಳಿ….. ಪುತ್ತೂರಿಗೆ ಬರಲಿದೆ ದೇಶದ ಲೇಟೆಸ್ಟ್ ಜ್ಯುವೆಲ್ಲರಿ ಟ್ರೆಂಡ್ ಮತ್ತು ವಿಶೇಷ ವಿನ್ಯಾಸಗಳು ಪುತ್ತೂರು ಹಾಗೂ ಕರಾವಳಿ ಭಾಗದ ಮಹಿಳೆಯರ ಆಭರಣ ಸಂಪ್ರದಾಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಕರಿಮಣಿ ಸರಗಳಲ್ಲಿ ಹೊಸತನ, ವೈವಿಧ್ಯತೆ ಹಾಗೂ ಇತ್ತೀಚಿನ ವಿನ್ಯಾಸಗಳನ್ನು ಪರಿಚಯಿಸುವ ಉದ್ದೇಶದಿಂದ ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನ ಮಾಲಕ ಈಶ್ವರ ಮುರಳಿ ಅವರು ಮುಂಬೈನಲ್ಲಿ ನಡೆದ ಪ್ರತಿಷ್ಠಿತ IIJS Bharat Premiere 2026 ಅಂತರರಾಷ್ಟ್ರೀಯ ಜ್ಯುವೆಲ್ಲರಿ ಪ್ರದರ್ಶನದಲ್ಲಿ ಭಾಗವಹಿಸಿದರು

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.