
2023ರ ಮಹಿಳಾ ಮೀಸಲಾತಿ ಬಿಲ್ ಜಾರಿಗೆ ತರದೆ ದೇಶದ ಮಹಿಳೆಯರಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದ್ರೋಹ ಮಾಡಿದೆ ಎಂದು ಆರೋಪಿಸಿ ಬಿ.ಸಿ.ರೋಡ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ, ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಮತ್ತು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ ಮಹಿಳೆಯರ ಅಭಿವೃದ್ಧಿಗೆ ಕಾಂಗ್ರೆಸ್ ಹಲವಾರು ಕೊಡುಗೆಗಳನ್ನು ನೀಡಿದೆ. ಕೇಂದ್ರ ಸರಕಾರ ದುರುದ್ದೇಶಪೂರಿತವಾಗಿ ಪ್ರಸ್ತುತ ಮಸೂದೆ ಮಂಡಿಸಿದ್ದು, ಅದಕ್ಕೆ ಸೋಲಾಗಿದೆ. ಇದಕ್ಕೂ ಮೊದಲು 2023ರ ಮಹಿಳಾ ಮೀಸಲಾತಿ ಬಿಲ್ ಜಾರಿ ಮಾಡಬೇಕಿತ್ತು ಎಂದರು.

ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ವಿವಿಧ ನಿಗಮಗಳ ಅಧ್ಯಕ್ಷರಾದ ಮಮತಾ ಗಟ್ಟಿ, ಲಾವಣ್ಯ ಬಲ್ಲಾಳ್, ಶಾಲೆಟ್ ಪಿಂಟೊ, ಪ್ರಮುಖರಾದ ಉಷಾ ಅಂಚನ್, ಐಡಾ ಸುರೇಶ್, ಜಯಂತಿ ಪೂಜಾರಿ, ಅಮಿತಾ ಭಂಡಾರಿ, ಧನಲಕ್ಷ್ಮೀ ಸಿ.ಬಂಗೇರ, ಜೆಸಿಂತಾ ಡಿಸೋಜ, ಶಬನಾ ಕಾವಳಕಟ್ಟೆ, ಆಸ್ಮಾ ಹಸೈನಾರ್, ಸಾರಿಕಾ ಪೂಜಾರಿ, ಮಂಜುಳಾ ಕುಶಲ ಪೆರಾಜೆ, ಆರ್.ಪದ್ಮರಾಜ್, ಬೇಬಿ ಕುಂದರ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಬಾಲಕೃಷ್ಣ ಅಂಚನ್, ಝೀನತ್ ಬೆಳ್ತಂಗಡಿ, ಚಂದ್ರಶೇಖರ ಭಂಡಾರಿ, ಎ.ಬಿ.ಅಬ್ದುಲ್ಲಾ ಕೊಳ್ನಾಡು, ಸುದರ್ಶನ ಜೈನ್, ಪಿ.ಬಿ.ವರ್ಗೀಸ್, ಮೋಹನ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಶೋಭಾ ಶೆಟ್ಟಿ, ಸಿರಾಜ್ ಮದಕ, ಸಿದ್ದೀಕ್ ಸರವು, ಮಹಮ್ಮದ್ ನಂದಾವರ, ಸುದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.


Be the first to comment on "ಬಂಟ್ವಾಳದಲ್ಲಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ"