ದೇವಸ್ಥಾನ ಎಂಬುದು ರೀಚಾರ್ಜಿಂಗ್ ಸೆಂಟರ್ ಇದ್ದಂತೆ…ಎಷ್ಟೇ ದೊಡ್ಡವನಾದರೂ ಚಿಕ್ಕವನಾಗಲು ಕಲಿಯಬೇಕು – ಪದ್ಯಾಣದಲ್ಲಿ ನ್ಯಾಯಮೂರ್ತಿ ವಿ. ಶ್ರೀಶಾನಂದ

ಅಭಿವೃದ್ಧಿ ಹೊಂದಬೇಕಾದರೆ, ಶಾಂತಿ ಮತ್ತು ಸುವ್ಯವಸ್ಥೆಯ ಪಾಲನೆಯಾದ ಧರ್ಮ ಪಾಲನೆ ಆಗಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.

ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಹಿನ್ನೆಲೆ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ಮಾಡಿದರು.

ದೇವಸ್ಥಾನ ಜ್ಞಾನಶಾಲೆ, ಉದ್ಯೋಗಕ್ಕೆ ಅವಕಾಶ, ದಾನಶಾಲೆಯಾಗಿತ್ತು, ಆತ್ಮ ಸಾಕ್ಷಾತ್ಕಾರವಾಗಲು ದೇವಸ್ಥಾನ ಪ್ರೇರಣೆ ಎಂದರು.

ಜಾಹೀರಾತು

ನೀನು ಎಷ್ಟು ಹೊತ್ರು ದೇವರನ್ನು ಹತ್ತಿರದಿಂದ ನೋಡಿದಿ ಎಂಬುದು ಮುಖ್ಯವಲ್ಲ. ದೇವರು ನಿಮ್ಮನ್ನು ಎಷ್ಟು ಹೊತ್ತು ನೋಡಿದ್ದಾನೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ದೇವಾಲಯ ಎಂಬುದು ರೀಚಾರ್ಜಿಂಗ್ ಸೆಂಟರ್ ಇದ್ದಂತೆ. ಬಾಹ್ಯ, ಅಂತರಂಗದ ಉಪಾಸನೆಗೆ ನೆರವಾಗುತ್ತದೆ. ದೇವಾಲಯಕ್ಕೆ ಹೋಗಬೇಕಾದರೆ, ಎರಡನ್ನು ಬಿಡಬೇಕು. ತಲೆಯಲ್ಲಿರುವ ಅಹಂಕಾರ, ಕಾಲಲ್ಲಿರುವ ಚಪ್ಲಿ ಬಿಡಬೇಕು. ಎಷ್ಟೇ ದೊಡ್ಡವನಾದರೂ ಚಿಕ್ಕವನಾಗಲು ಕಲಿಯಬೇಕು ಎಂದರು.

ನಂಬಿಕೆಗಳ ಪುನರುತ್ಥಾನ ಮಾಡಿಕೊಳ್ಳಬೇಕು. ಅಷ್ಟಬಂಧ ಬ್ರಹ್ಮಕಲಶೋತ್ಸವ ಎಂಬುದು ಅದರ ಒಂದು ಭಾಗ. ಸರಳತೆಯನ್ನು ಸಾಧ್ಯ ಮಾಡುವ ರಚನಾತ್ಮಕ ಸನ್ನಿವೇಶ ದೇವಾಲಯಗಳಲ್ಲಿ ಇದೆ. ದೇವರ ಗರ್ಭಗುಡಿಯ ಪಾವಿತ್ರ್ಯದ ಕುರಿತು ಅರಿವಿರಬೇಕು ಗರ್ಭಗುಡಿಗೆ ಅರ್ಹತೆ ಇರುವವರು ಮಾತ್ರ ಪ್ರವೇಶ ಮಾಡಬೇಕು, ಹೇಗೆ ಆಪರೇಶನ್ ಥಿಯೇಟರ್ ಒಳಗೆ ಹೋಗಿರುವ ವೈದ್ಯರ ಭೇಟಿಯಾಗಲು ಅವರ ಸಂಬಂಧಿಕರಿಗೆ ಸಾಧ್ಯವಿಲ್ಲವೋ ಹಾಗೇ ಗರ್ಭಗುಡಿಯ ವ್ಯವಸ್ಥೆ. ದೇವಸ್ಥಾನಗಳು ಕೌಟುಂಬಿಕ ಹಾಗೂ ಸಾಂಸ್ಕೃತಿಕ ಪರಂಪರೆ ಮೌಲ್ಯವನ್ನು ವೃದ್ಧಿಸಬೇಕು ಎಂದರು.

ಭಾರತದಲ್ಲಿ ಸಾಮಾಜಿಕ ಮೌಲ್ಯ ಕುಸಿಯುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದ ಅವರು, ಭಗವಂತನ ಕೈಂಕರ್ಯ ಮಾಡುವ ದೇಶ ಎಂಬುದು ಭಾರತ ಎಂದರು.
ಬೆಳಗ್ಗೆ ಎದ್ದು ಮೊಬೈಲ್ ಹುಡುಕುವುದು ವಿಶ್ವದ ಎಂಟನೇ ಅದ್ಭುತವಾಗುತ್ತಿದೆ. ಬೆಳಗ್ಗೆ ನಾವು ಭೂಮಿತಾಯಿ ನೆನೆಸಿಕೊಳ್ಳಬೇಕು ಎಂದರು.
ಧರ್ಮ ಎಂಬ ಪದಕ್ಕೆ ಸಂಸ್ಕೃತ ಹೊರತುಪಡಿಸಿದರೆ ಬೇರೆ ಯಾವುದೇ ಸಮಾನಾರ್ಥಕ ಪದ ಇಲ್ಲ. ಧಾರಯೇತ್ ಇತಿ ಧರ್ಮ. ನಾನು ಎಷ್ಟೇ ದೊಡ್ಡವನಾದರೂ ಭಗವಂತ ನೀಡಿದ್ದು ಎಂದರು. ಬೀಜಾಕ್ಷರಗಳನ್ನು ರೇಖಾಗಣಿತ ಮೂಲಕ ಹಿಡಿದಿಟ್ಟು ಅದನ್ನು ಫೋಕಸ್ ಮಾಡುವುದನ್ನು ಶ್ರೀಚಕ್ರದಲ್ಲಿ ಕಂಡಿದ್ದೇವೆ. ಅದರ ದರ್ಶನಭಾಗ್ಯದಿಂದ ಫಲಪ್ರಾಪ್ತಿಯಾಗಿದೆ, ಲಲಿತಾದೇವಿ ಅನುಗ್ರಹ ಪ್ರಾಪ್ತಿಯಾಗಬೇಕಿದ್ದರೆ ಶ್ರೀಚಕ್ರದರ್ಶನದಿಂದ ಸಾಧ್ಯ ಎಂದರು
ಪುರಾಣದ ಯುಗದಿಂದಲೂ ದುಷ್ಟಶಕ್ತಿಗಳನ್ನು ನಾವು ನೋಡ್ತೇವೆ, ಶ್ರೀಚಕ್ರದಿಂದ ದುಷ್ಟಶಕ್ತಿಗಳ ನಿವಾರಣೆ ಆಗುತ್ತದೆ, ಮಾನಸಿಕ ಅಶಾಂತಿ, ಕ್ಲೇಷ ಕಲಹ ಉಂಟಾದರೆ ಆಗುತ್ತದೆ. ಪದ್ಯಾಣದಲ್ಲಿರುವ ಸುಂದರ ಪರಿಸರದಲ್ಲಿ ಮಹಾಲಿಂಗೇಶ್ವರ ಮತ್ತು ಶ್ರೀಚಕ್ರವಿದೆ ಎಂದರು.

ಮಂಗಳೂರು ರಾಮಕೃಷ್ಣ ಮಠ ಅಧ್ಯಕ್ಷ ಶ್ರೀ ಜಿತಕಾಮಾನಂದಜೀ ಮಹಾರಾಜ್ ಮಾತನಾಡಿ, ಭಗವಂತ ನಮ್ಮನ್ನು ಕಾಯುತ್ತಿದ್ದಾನೆ ಎಂಬ ಭಾವನೆ ನಾವು ದೇವಸ್ಥಾನದೊಳಗೆ ಹೋಗುವ ವೇಳೆ ಇರಬೇಕು ಎಂದರು‌.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಉದ್ಘಾಟಿಸಿ ಮಾತನಾಡಿ, ಭಗವಂತನ ಇರುವಿಕೆ ಸಹಸ್ರ ವರ್ಷಗಳ ಮೊದಲೂ ಇತ್ತು ಎಂದರು.

ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಅಧ್ಯಕ್ಷತೆ ವಹಿಸಿ ಮಾತನಾಡಿ ದೇವಸ್ಥಾನಕ್ಕೆ ಬರುವಾಗ ಎಲ್ಲರೂ ಹಿಂದುಗಳಾಗಿ ಬರಬೇಕು‌. ಎಲ್ಲರನ್ನೂ ಸಮಾನರಾಗಿ ಕಾಣಬೇಕು ಎಂದರು.

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ರಾಮನಾರಾಯಣ ಜೋಷಿ ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶೂ ಮಾಲೀಕ ಶ್ರೀಪತಿ ಭಟ್,
ಮಂಜೇಶ್ವರ ಶ್ರೀ ಅರಸು ಸಂಕಲ ದೈವಕ್ಷೇತ್ರದ ಅಧ್ಯಕ್ಷ ಡಾ.ಶ್ರೀಧರ ಭಟ್ ಮಾವೆ, ಮಂಜೇಶ್ವರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ನ್ಯಾಯವಾದಿ ಶಂಭು ಶರ್ಮಾ, ಸತ್ಯಸಾಯಿ ಸೇವಾ ಸಮಿತಿ ಕಾಸರಗೋಡು ಅಧ್ಯಕ್ಷ ಹಿರಣ್ಯ ಮಹಾಲಿಂಗ ಭಟ್, ಚಿಪ್ಪಾರು ವಿಷ್ಣುಮೂರ್ತಿ ದೇವಸ್ಥಾನ ನಿಕಟಪೂರ್ವ ಅಧ್ಯಕ್ಷ ಸೀತಾರಾಮ ಬಲ್ಲಾಳ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಎಂ.ಡಿ. ಗೋಪಾಲಕೃಷ್ಣ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಚ ಡಾ.ಶಾಮ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಅರುಣಶ್ಯಾಮ್, ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮಸುದರ್ಶನ ಹೊಸಮೂಲೆ ಸ್ವಾಗತಿಸಿದರು. ಡಾ.ಸುಬ್ರಹ್ಮಣ್ಯ ಪದ್ಯಾಣ ವಂದಿಸಿದರು. ಸನತ್ ಕುಮಾರ್ ಪದ್ಯಾಣ ಪ್ರಾರ್ಥಿಸಿದರು. ಶರತ್ ಭಟ್ ಸೇರಾಜೆ ಮತ್ತು ನವ್ಯಕೃಷ್ಣ ಮಾಣಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ದೇವಸ್ಥಾನ ಎಂಬುದು ರೀಚಾರ್ಜಿಂಗ್ ಸೆಂಟರ್ ಇದ್ದಂತೆ…ಎಷ್ಟೇ ದೊಡ್ಡವನಾದರೂ ಚಿಕ್ಕವನಾಗಲು ಕಲಿಯಬೇಕು – ಪದ್ಯಾಣದಲ್ಲಿ ನ್ಯಾಯಮೂರ್ತಿ ವಿ. ಶ್ರೀಶಾನಂದ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*