

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿ.21ರಂದು ಸಂಜೆ ನಡೆಯಲಿರುವ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಈ ಬಾರಿ ಸಂಸದರೂ ಆಗಿರುವ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಭಾಗವಹಿಸಲಿದ್ದಾರೆ.
ಈ ವಿಷಯವನ್ನು KALLADKA SRIRAMA VIDYAKENDRA ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರೂ ಆಗಿರುವ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರನಟ, ನಿರ್ಮಾಪಕ ಪ್ರಕಾಶ್ ಬೆಳವಾಡಿ, ಉದ್ಯಮಿಗಳಾದ ಮನೋಜ್ ಸಿಂಗ್, ಸೀಮಾ ಬಿ.ಆರ್. ಶೆಟ್ಟಿ, ಡಾ. ವಿಜಯ ಜಿ.ಕಲಾಂತ್ರಿ, ಸಿ.ರವಿಕಾಂತ್, ಸಂಪತ್ ಶೆಟ್ಟಿ, ಪತ್ರಕರ್ತ ಉಮೇಶ್ ರಘುವಂಶಿ, ಡಾ.ಶಿಶಿರ್ ಶೆಟ್ಟಿ ಸಹಿತ ಹಲವು ಗಣ್ಯರು ಭಾನುವಾರ ಸಂಜೆ 6 ಗಂಟೆಯಿಂದ ನಡೆಯುವ ಕ್ರೀಡೋತ್ಸವ ವೀಕ್ಷಿಸಲು ಭಾಗವಹಿಸುವರು ಎಂದು ಡಾ. ಭಟ್ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಿಶುನೃತ್ಯ, ಸಂಚಲನ, ಘೋಷ್ ಪ್ರದರ್ಶನ, ಘೋಷ್ ಪ್ರದರ್ಶನ, ಜಡೆಕೋಲಾಟ, ನಿಯುದ್ಧ, ಯೋಗಾಸನ, ಪ್ರಾಥಮಿಕ ಸಾಮೂಹಿಕ, ನೃತ್ಯಭಜನೆ, ದೀಪಾರತಿ, ಮಲ್ಲಕಂಭ, ಘೋಷ್, ನೃತ್ಯವೈವಿಧ್ಯ, ಚಕ್ರ ಸಮತೋಲನ, ಬೆಂಕಿ ಸಾಹಸ, ಕಾಲ್ಚಕ್ರ, ಕೂಪಿಕಾ, ಪ್ರೌಢ ಸಾಮೂಹಿಕ ಸೇರಿ ಒಟ್ಟು 19 ವಿಧದ ಪ್ರದರ್ಶನಗಳು ಇಲ್ಲಿವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.


Be the first to comment on "ಕಲ್ಲಡ್ಕಕ್ಕೆ ಮೈಸೂರು ಯದುವೀರ ಒಡೆಯರ್, 21ರಂದು ನಡೆಯುವ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಹಲವು ವೈವಿಧ್ಯ"