ಧಾರ್ಮಿಕ ಪ್ರಜ್ಞೆ ಮತ್ತು ವೈದಿಕ ಶಿಕ್ಷಣದ ಮೂಲಕ ಯುವಪೀಳಿಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.
ಬಂಟ್ವಾಳ ತಾಲೂಕಿನ ಮಾಣಿ ಭರಣಿಕೆರೆಯಲ್ಲಿರುವ ನ್ಯಾಯವಾದಿ ಶಿವಗಿರಿ ಸತೀಶ್ ಭಟ್ ಅವರ ಮನೆಯಲ್ಲಿ ಸಂಪನ್ನಗೊಂಡ ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಾಲಾ ಪ್ರತಿಷ್ಠಾನದ 2025ನೆ ಇಸವಿಯ ಸರಣಿ ಶಿವ ಪೂಜಾ ಸಮಾಪನ ಸಮಾರಂಭದಲ್ಲಿ ಅವರು ಸಂದೇಶ ನೀಡಿದರು. ಧರ್ಮಜ್ಞಾನ, ದೇಶಭಕ್ತಿ ಮತ್ತು ದೇಹಶುದ್ಧಿಯ ತ್ರಿಭಕ್ತಿಗಳು ಅಗತ್ಯವನ್ನು ಅವರು ತಿಳಿಯಪಡಿಸಿದರು.

ಸಮಾಪನ ಭಾಷಣ ಮಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಇವರು ಭಾರತೀಯ ಸಂಸ್ಕೃತಿ, ಕುಟುಂಬ ಮೌಲ್ಯಗಳು ಮತ್ತು ಹಿಂದೂ ಸಮಾಜದ ಮೂಲ ಚಿಂತನೆಗಳ ಮಹತ್ವವನ್ನು ಹೇಳಿದರು ಭಾರತೀಯ ಪರಂಪರೆಯು ಜಗತ್ತಿಗೆ ಜೀವನದ ದಾರಿದೀಪವಾಗಿದೆ ಸಮಾಜದ ಪುನರ್‌ನಿರ್ಮಾಣಕ್ಕಾಗಿ ಧಾರ್ಮಿಕ ಜಾಗೃತಿ, ಕುಟುಂಬ ಮೌಲ್ಯಗಳ ಪೋಷಣೆ ಮತ್ತು ರಾಷ್ಟ್ರಭಕ್ತಿಯ ಅಗತ್ಯವಿದೆ ಎಂದು ಹೇಳಿದರು.

ಶ್ರೀ ಪ್ರತಿಷ್ಠಾನ ನಡೆದುಬಂದ ದಾರಿಯನ್ನು ಪ್ರಧಾನ ಕಾರ್ಯದರ್ಶಿ ಶ್ರೀದೇವಿ ನಾಗರಾಜ್ ಭಟ್ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಣಿ ಶಿವಪೂಜಾ ಅಭಿಯಾನ ಸಂಚಾಲಕ ಸತೀಶ್ ಭಟ್ ಶಿವಗಿರಿ ಮಾತನಾಡಿ, ಪ್ರತಿಷ್ಠಾನವು ೫೭೦ ಕುಟುಂಬವನ್ನು ಸಂಸ್ಕಾರಯುತವಾಗಿ ಸಮ್ಮಿಲನಗೊಳಿಸಿದೆ ಎಂದು ಹೇಳಿದರು.
ಶ್ರೀ ಕೇಶವ ಕೃಪಾ ಸರಣಿ ಶಿವ ಪೂಜಾ ಅಭಿಯಾನದ ಪ್ರಧಾನ ಸಂಚಾಲಕ ಗೋಪಾಲಕೃಷ್ಣ ಭಟ್ ಶಿವನಿವಾಸ ಮತ್ತು ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಸುಳ್ಯ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದರು.
ಶಿಬಿರದಲ್ಲಿ 4ನೇ ವರ್ಷವನ್ನು ಪೂರೈಸಿದ ವಿದ್ಯಾರ್ಥಿಗಳಿಂದ ಮೇಧಾ ಸರಸ್ವತಿ ಹವನ ನಡೆಯಿತು. ಭಾಗವಹಿಸಿದ ವಿದ್ಯಾರ್ಥಿಗಳನ್ನು ಪ್ರತಿಷ್ಠಾನದ ಪರವಾಗಿ ಪ್ರತೀಕ್ಷಾ ಪುರಸ್ಕಾರ ಹಾಗು ಸ್ಮರಣಿಕೆ ನೀಡಿ ಶ್ರೀಗಳು ಆಶೀರ್ವದಿಸಿದರು ಪ್ರತಿಷ್ಠಾನದ ಪ್ರಧಾನ ಆಚಾರ್ಯ ಪುರೋಹಿತ ನಾಗರಾಜ್ ಭಟ್ ಮತ್ತು ದಂಪತಿಯನ್ನು ಮತ್ತು ಗುರುಗಳಾದ ಸುದರ್ಶನ ಭಟ್ ಉಜಿರೆ ಅವರನ್ನು ಗುರುವಂದನೆ ನೀಡಿ ಗೌರವಿಸಲಾಯಿತು.
ಪೋಷಕರಾದ ಗಣೇಶ್ ಚಂದ್ರ ಭಟ್ ಸ್ವಾಗತಿಸಿ ಕಾರ್ತಿಕ ಭಟ್ ಕೇಪುಳಗುಡ್ಡೆ ಧನ್ಯವಾದ ಸಮರ್ಪಿಸಿದರು. ಸೌಮ್ಯ ಜಾಲ್ಸೂರು ಹಾಗೂ ವಸಂತಲಕ್ಷ್ಮಿ ನೀರಬಿದಿರೆ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿದ್ಯಾರ್ಥಿಗಳಿಂದ ಹಾಗು ಪೋಷಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು


Be the first to comment on "ಧಾರ್ಮಿಕ ಪ್ರಜ್ಞೆ, ವೈದಿಕ ಶಿಕ್ಷಣದ ಮೂಲಕ ಸಂಸ್ಕಾರ: ಸರಣಿ ಶಿವಪೂಜಾ ಸಮಾಪನದಲ್ಲಿ ಎಡನೀರು ಶ್ರೀಗಳು"