
ನಮ್ಮದು ಅರಳಿಸುವ ಸಂಸ್ಕೃತಿ. ದೀಪವನ್ನು ಬೆಳಗಿಸುವ ಮೂಲಕ ಆಚರಣೆಗಳು ನಡೆಯಲಿ. ಬದುಕಿಗೆ ಸಂಸ್ಕಾರ ಬೇಕು. ಅಪ್ಪ ಅಮ್ಮ ನೀಡುವ ಸಂಸ್ಕಾರದಿಂದ ಸಂಸ್ಕೃತಿ ಉಳಿಯಲು ಸಾಧ್ಯ ಆಗುತ್ತದೆ. ನಿರೀಕ್ಷೆಯ ಬದಲು ಪರಿಶ್ರಮದಿಂದ ಪರಿವರ್ತನೆ ಮಾಡಿ ಯಶಸ್ಸು ಸಾಧಿಸೋಣ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.


OPTIC WORLD
ಶುಕ್ರವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ವತಿಯಿಂದ ಏರ್ಪಡಿಸಲಾದ ಶ್ರೀಗಳ ಜನ್ಮದಿನೋತ್ಸವ, ಗ್ರಾಮೋತ್ಸವ 2025, ಸೇವಾ ಸಂಭ್ರಮ ಹಾಗೂ ಗುರುವಂದನಾ ಕಾರ್ಯಕ್ರಮದ ಸಂದರ್ಭ ಧಾರ್ಮಿಕ ಸಭೆಯಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು.

ಗ್ರಾಮೋತ್ಸವದ ತಿರುಳೇ ಪ್ರೀತಿ ವಿಶ್ವಾಸದ್ದಾಗಿದೆ. ಈ ಪ್ರೀತಿಯಿಂದ ಗ್ರಾಮೋತ್ಸವದ ಉದ್ದೇಶ ಯಶಸ್ವಿಯಾಗಿದೆ. ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಸ್ವಾಮೀಜಿ ನುಡಿದರು.
ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ವಿವಿಧ ಕ್ಷೇತ್ರಗಳ ಗಣ್ಯರಾದ ಎಕ್ಸ್ ಪರ್ಟ್ ಗ್ರೂಪ್ ಆಫ್ ಎಜುಕೇಶನ್ ಇನ್ ಸ್ಟಿಟ್ಯುಶನ್ಸ್ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್, ಎಂಐಓ ಆಡಳಿತ ನಿರ್ದೇಶಕ ಡಾ. ಡಿ. ಸುರೇಶ ರಾವ್, ಅದಾನಿ ಗ್ರೂಪ್ ಲಿ. ಮಂಗಳೂರಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿಶೋರ್ ಆಳ್ವ, ಹೋಟೆಲ್ ಉದ್ಯಮಿ ಶಂಕರ ಕೆ. ಶೆಟ್ಟಿ ಅಂಕ್ಲೇಶ್ವರ, ಮುಂಬೈನ ವೆಲ್ ಕಮ್ ಪ್ಯಾಕೇಜಿಂಗ್ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ರವೀಂದ್ರನಾಥ ಭಂಡಾರಿ ಮತ್ತು ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈ. ಲಿ. ಆಡಳಿತ ನಿರ್ದೇಶಕ ದಿವಾಕರ ದಾಸ್ ನೇರ್ಲಾಜೆ ಪಾಲ್ಗೊಂಡಿದ್ದರು. ಜನ್ಮದಿನೋತ್ಸವ ಸಮಿತಿಯ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಬರೋಡಾ, ಮಹಾರಾಷ್ಟ್ರ ಸಮಿತಿ ಅಧ್ಯಕ್ಷ ವಾಮಯ್ಯ ಬಿ ಶೆಟ್ಟಿ, ಮುಂಬೈ ಸೇವಾ ಬಳಗದ ಪ್ರಭಾಕರ ಶೆಟ್ಟಿ, ಸ್ವಾಗತ ಸಮಿತಿಯ ಅಧ್ಯಕ್ಷ ಸಹಕಾರ ರತ್ನ ಎ. ಸುರೇಶ್ ರೈ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಲಿಂಗಪ್ಪ ಗೌಡ ಪನೆಯಡ್ಕ, ಕೃಷ್ಣ ಶೆಟ್ಟಿ ತಾರೆಮಾರ್, ಕೋಶಾಧಿಕಾರಿ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿ ಗುತ್ತು, ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ, ಸಂಘಟನಾ ಕಾರ್ಯದರ್ಶಿ ಮಾತೇಶ ಭಂಡಾರಿ ಒಡಿಯೂರು, ಗುರುದೇವ ಸಂಸ್ಥಾನದ ಕಾರ್ಯ ನಿರ್ವಾಹಕ ಪದ್ಮನಾಭ ಒಡಿಯೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾಗತ ಸಮಿತಿ, ಜನ್ಮದಿನೋತ್ಸವ ಸಮಿತಿಯ ಮತ್ತು ಶ್ರೀಸಂಸ್ಥಾನದ ಸಹ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಊರ ಪರವೂರ ಭಕ್ತರು ಹಾಜರಿದ್ದರು.
ಭಕ್ತಿಸಂಕೀರ್ತನೆ, ಹನುಮಾನ್ ಚಾಲೀಸಾ ಸ್ಪರ್ಧೆ,
ಕೆಸರುಗದ್ದೆ ಕ್ರೀಡಾಕೂಟ, ಒಳಾಂಗಣ ಕ್ರೀಡಾಕೂಟ , ಅಂತರ್ ಕಾಲೇಜು ಕಿರುನಾಟಕ ಸ್ಪರ್ಧೆ ಇತ್ಯಾದಿಗಳು ನಡೆದಿದ್ದು ಬಹುಮಾನ ವಿತರಿಸಲಾಯಿತು. ಅನಾರೋಗ್ಯ ಪೀಡಿತರ ಚಿಕಿತ್ಸೆಗೆ, ಕುಟುಂಬಗಳಿಗೆ ಮರಣ ಸಾಂತ್ವನ ನೆರವು , ಮನೆ ನಿರ್ಮಾಣಕ್ಕೆ ವಿಧ್ಯಾಭ್ಯಾಸ ಕ್ಕೆ ಸಹಾಯ ಟ್ರಸ್ಟ್/ ಭಜನಾ ಮಂದಿರಗಳಿಗೆ ನೆರವು ಸೇರಿದಂತೆ ಆರ್ಥಿಕ ನೆರವು ನೀಡಲಾಯಿತು. ಪ್ರಕಾಶ ಶೆಟ್ಟಿ ಪೇಟೆಮನೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.



Be the first to comment on "Odiyoor: ಸಂಸ್ಕಾರದಿಂದ ಸಂಸ್ಕೃತಿ ಸಂರಕ್ಷಣೆ ಸಾಧ್ಯ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ"