
OPTIC WORLD


ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಜನ್ಮದಿನೋತ್ಸವ, ಗ್ರಾಮೋತ್ಸವ-2025 ಪ್ರಯುಕ್ತ ರಜತ ತುಲಾಭಾರ ಉಯ್ಯಾಲೆ ಸೇವೆ ಪಾದಪೂಜೆ ಶ್ರೀ ಕ್ಷೇತ್ರ ಒಡಿಯೂರಿನಲ್ಲಿ ಜರಗಿತು
ಸಾಧ್ವಿ ಮಾತಾನಂದಮಯಿ ದಿವ್ಯ ಸಾನ್ನಿಧ್ಯ ವಹಿಸಿದ್ದರು ವೇ. ಮೂ. ಚಂದ್ರಶೇಖರ ಉಪಾಧ್ಯಾಯ ಅವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆದವು
ಪೂರ್ವಾಹ್ನ ಗಂಟೆ 8ರಿಂದ ಗಣಪತಿ ಹವನ,ಮಹಾಪೂಜೆ, ಅನಂತ ರವಿರಾಜ್ ಒಡಿಯೂರು ಮತ್ತು ಬಳಗದವರಿಂದ ಸಂಕೀರ್ತನೆ ಜರಗಿತು ಅನಂತರ ಪಾದಪೂಜೆ, ರಜತ ತುಲಾಭಾರ, ಉಯ್ಯಾಲೆ ಸೇವೆ ಮತ್ತು ಗುರುವಂದನೆ ನಡೆಯಿತು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಧಾರ್ಮಿಕ ಸಭೆ ಜರಗಿತು.
ಅಪರಾಹ್ನ ಗಂಟೆ 3ರಿಂದ ಸಾಮೂಹಿಕ ವರಮಹಾಲಕ್ಷ್ಮೀ ವ್ರತಪೂಜೆ ಅನಂತರ ಮಂಗಳೂರು ಲಲಿತಾ ಕಲಾವಿದರಿಂದ ಕದ್ರಿ ನವನೀತ ಶೆಟ್ಟಿ ವಿರಚಿತ ಶನಿಮಹಾತ್ಮೆ ಕನ್ನಡ ನಾಟಕ ಜರಗಿತು. ರಾತ್ರಿ ಗಂಟೆ ಏಳರಿಂದ ವಿಶೇಷ ರಂಗಪೂಜೆ,ಬೆಳ್ಳಿ ರಥೋತ್ಸವ, ಮಹಾಪೂಜೆ ನಡೆಯಿತು. ಬೆಳ್ಳಿಹಬ್ಬದ ಗ್ರಾಮೋತ್ಸವದ ಪ್ರಯುಕ್ತ ಈಗಾಗಲೇ ಬೃಹತ್ ರಕ್ತದಾನ ಶಿಬಿರ, ಜಿಲ್ಲೆಯ ಹಲವೆಡೆ ಸ್ವಚ್ಚತಾ ಆಂದೋಲನ ನಡೆದಿದೆ. ಭಕ್ತಿಸಂಕೀರ್ತನೆ, ಹನುಮಾನ್ ಚಾಲೀಸಾ ಸ್ಪರ್ಧೆ, ಕೆಸರುಗದ್ದೆ ಕ್ರೀಡಾಕೂಟ, ಒಳಾಂಗಣ ಕ್ರೀಡಾಕೂಟ , ಅಂತರ್ ಕಾಲೇಜು ಕಿರುನಾಟಕ ಸ್ಪರ್ಧೆ ಇತ್ಯಾದಿಗಳು ನಡೆದಿದ್ದು ಬಹುಮಾನ ವಿತರಿಸಲಾಯಿತು.
ಪರಿಶ್ರಮದಿಂದ ಪರಿವರ್ತನೆ ಎಂಬ ಆಶಯದೊಂದಿಗೆ ವರ್ತಮಾನದ ದುಡಿಮೆ ಭವಿಷ್ಯದ ಭದ್ರತೆಯ ಅಡಿಗಲ್ಲಿನ ಜತೆ ಅದ್ಭುತ ಶಕ್ತಿಯಾಗಬೇಕು ಉದ್ದೇಶವಿಟ್ಟುಕೊಂಡು ಗ್ರಾಮೋತ್ಸವ ಸಂಪನ್ನಗೊಂಡಿತು.


Be the first to comment on "Odiyoor: ಜನ್ಮದಿನೋತ್ಸವ: ಒಡಿಯೂರು ಶ್ರೀಗಳಿಗೆ ರಜತ ತುಲಾಭಾರ"