ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ದ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವಾರ್ಷಿಕ ಮಹಾಸಭೆ ನಿತೀಶ್ ಕುಲಾಲ್ ಪಲ್ಲಿಕಂಡ ಅಧ್ಯಕ್ಷತೆಯಲ್ಲಿ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಜರುಗಿತು.

2024-25 ಸಾಲಿನ ವರದಿಯನ್ನು ಕಾರ್ಯದರ್ಶಿ ಪುನೀತ್ ಕಾಮಾಜೆ ಮಂಡಿಸಿದರು. ಮತ್ತು ಕೋಶಾಧಿಕಾರಿ ಸಂತೋಷ್ ಮಯ್ಯರಬೈಲು ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು..ರಾಜ್ಯಾಧ್ಯಕ್ಷರಾದ ಸುಧಾಕರ್ ಸಾಲ್ಯಾನ್ ಉಪಸ್ಥಿತಿಯಲ್ಲಿ 2025- 27 ನೇ ಸಾಲಿಗೆ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಸುಮಿತ್ ಸಾಲ್ಯಾನ್ ಅಧ್ಯಕ್ಷರಾಗಿ, ಜಯಗಣೇಶ್ ಬಂಗೇರ ದಾಸಕೋಡಿ ಪ್ರಧಾನ ಕಾರ್ಯದರ್ಶಿಯಾಗಿ, ಸಂತೋಷ್ ಮಯ್ಯರಬೈಲು ಕೋಶಾಧಿಕಾರಿಯಾಗಿ, ದುರ್ಗಾಶ್ರೀ ಪ್ರದೀಪ್ ಮಹಿಳಾ ಸಂಚಾಲಕಿಯಾಗಿ ಮತ್ತು ಎಚ್ ಕೆ ನಯನಾಡು ಗೌರವ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಗೌರವ ಸಲಹೆಗಾರರು ಹಾಗೂ ಇತರ ಪದಾಧಿಕಾರಿಗಳ ಆಯ್ಕೆ ನಡೆಯಿತು.ಈ ಸಂದರ್ಭ ಜಿಲ್ಲೆಯ ,ವಿಭಾಗೀಯ ಬಂಟ್ವಾಳ ಯುವ ವೇದಿಕೆ ಪ್ರಮುಖಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಆ.14ರಂದು 2025-27 ಸಾಲಿನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ ಕುಲಾಲ ಭವನ ಬಂಟ್ವಾಳದಲ್ಲಿ ನಡೆಯಲಿದೆ.

OPTIC WORLD


Be the first to comment on "ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ, ಮಹಿಳಾ ಸಂಘಟನೆಗಳ ಒಕ್ಕೂಟ ವಾರ್ಷಿಕ ಮಹಾಸಭೆ"