ಚೆನ್ನೈ ಬೆಂಗಳೂರು ಹಾಸನ ಮಂಗಳೂರು, ಮಂಗಳೂರು ಬೆಂಗಳೂರು ತಿರುಪತಿ ರೈಲು ಆರಂಭಿಸಬೇಕು ಎಂದು ರೈಲ್ವೆ ಹೋರಾಟಗಾರರು ರೈಲ್ವೆ ಡಿ.ಆರ್.ಎಂ.ಅವರಿಗೆ ಮನವಿ ಮಾಡಿದ್ದಾರೆ.

ಮೈಸೂರು ಡಿವಿಷನಲ್ ರೈಲ್ವೆ ಮೆನೇಜರ್ ಮುದಿತ್ ಮಿತ್ತಲ್ ಅವರು ಗುರುವಾರ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ವೇಳೆ ಹೋರಾಟಗಾರ ಜಿ.ಕೆ.ಭಟ್ ಅವರು ಮನವಿಯ ಪ್ರತಿಯನ್ನು ಬಂಟ್ವಾಳದಲ್ಲಿ ಅವರಿಗೆ ನೀಡಿದರು. ಘಟ್ಟ ಪ್ರದೇಶದಲ್ಲಿ ಹೆಚ್ಚು ಪ್ರಯಾಣಿಕ ರೈಲುಗಳಿಗೆ ಅವಕಾಶ ನೀಡಬೇಕು. ಗೂಡ್ಸ್ ರೈಲು ನಿರ್ವಹಣೆಗೆಂದು ರಚಿಸಿದ ಹಾಸನ ಮಂಗಳೂರು ರೈಲು ಕಂಪನಿಯನ್ನು ಬರ್ಖಾಸ್ತು ಮಾಡಬೇಕು. ನೈಋತ್ಯ ವಲಯದಲ್ಲಿ ಪಡೀಲ್ ನಿಂದ ಸುಬ್ರಹ್ಮಣ್ಯದವರೆಗೆ ಮತ್ತು ಸಕಲೇಶಪುರದಿಂದ ಹಾಸನದವರೆಗೆ ರೈಲುಗಳ ವೇಗವನ್ನು ಗರಿಷ್ಠ 110 ಕಿ.ಮೀ. ಗಂಟೆಗೆ ಏರಿಸಬೇಕು. ಘಾಟ್ ವಿಭಾಗದಲ್ಲಿ ಸುಬ್ರಹ್ಮಣ್ಯರೋಡ್ ನಿಂದ ಸಕಲೇಶಪುರವರೆಗೆ ಈಗಿನ 30 ಕಿ.ಮೀ.ನಿಂದ ಗಂಟೆಗೆ 45 ಕಿ.ಮೀ. ರೈಲಿನ ವೇಗ ಹೆಚ್ಚಿಸಬೇಕು. ಇದಕ್ಕಿಂತಲೂ ಕಡಿದಾದ ಕ್ಯಾಸಲ್ ರಾಕ್ ಘಾಟ್ ನಲ್ಲಿ ಇದೇ ವೇಗವಿದೆ. ಘಾಟ್ ವಿಭಾಗದಲ್ಲಿ ನಾರ್ಮಲ್ ಕ್ರಾಸಿಂಗ್ ಅವಕಾಶ ನೀಡಬೇಕು. ಸಮಯ ಉಳಿತಾಯ ಇದರಿಂದ ಸಾಧ್ಯ. ಘಾಟ್ ವಿಭಾಗದಲ್ಲಿ ಕ್ರಾಸಿಂಗ್ ಅವಕಾಶವಿಲ್ಲದ ಎರಡು ನಿಲ್ದಾನದಲ್ಲಿ ಕ್ಯಾಚ್ ಸ್ಲೈಡಿಂಗ್ ಕಾಮಗಾರಿ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ಸುಬ್ರಹ್ಮಣ್ಯ ಸಕಲೇಶಪುರ ವಿಭಾಗವನ್ನು ಅಭಿವೃದ್ಧಿಪಡಿಸುವುದು, ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣವನ್ನು ಹೊಸ ರೈಲು ಆರಂಭಿಸುವಂತೆ ಅಭಿವೃದ್ಧಿಪಡಿಸುವುದೇ ಮೊದಲಾದ ವಿಚಾರಗಳಿರುವ ಮನವಿಯನ್ನು ಸಲ್ಲಿಸಲಾಯಿತು.

OPTIC WORLD


Be the first to comment on "Dakshina Kannada: ಪ್ರಯಾಣಿಕ ರೈಲುಗಳಿಗೆ ಆದ್ಯತೆ, ವ್ಯವಸ್ಥೆಯಲ್ಲಿ ಸುಧಾರಣೆ: ರೈಲ್ವೆ ಡಿಆರ್ ಎಂ ಗೆ ಮನವಿ ನೀಡಿದ ಹೋರಾಟಗಾರರು"