
ಮಂಗಳೂರು: ಬಂಟ್ವಾಳ ವಲಯದ ಅರಣ್ಯ ಇಲಾಖೆಯ ಗಸ್ತುಪಾಲಕ ಜಿತೇಶ್.ಪಿ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ. ಇವರು ಸುಮಾರು 20 ವರ್ಷಗಳಿಂದ ಪಂಜ, ಮಂಗಳೂರು, ಬಂಟ್ವಾಳ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಬಂಟ್ವಾಳ ವಲಯದಲ್ಲಿ ಗಸ್ತು ಪಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಗಳೂರು ವಿಭಾಗದ ಗಸ್ತು ಪಾಲಕ ಹಾಗೂ ಅರಣ್ಯ ವೀಕ್ಷಕರ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇವರ ಅರಣ್ಯ ಇಲಾಖೆಯಲ್ಲಿನ ದಕ್ಷ ,ಹಾಗೂ ಪ್ರಾಮಾಣಿಕತೆಯ ಕೆಲಸವನ್ನು ಪರಿಗಣಿಸಿ ಅಕ್ರಮವಾಗಿ ಮರ ಕಡಿಯುವುದು ಮತ್ತು ಕಳ್ಳ ಸಾಗಾಣಿಕೆ ತಡೆಗಟ್ಟುವ ಸಾಧನೆಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
Bantwal zone forest department patrol officer Jitesh P has been awarded the Chief Minister’s Medal.


Be the first to comment on "Bantwal : ಅರಣ್ಯ ಗಸ್ತುಪಾಲಕ ಜಿತೇಶ್.ಪಿ. ಅವರಿಗೆ ಮುಖ್ಯಮಂತ್ರಿ ಪದಕ"