ಫ್ಲೈಓವರ್ ತಳಭಾಗದಲ್ಲಿ ಮಣ್ಣಿನ ರಾಶಿಯನ್ನೇ ಹಾಕಿದ ಪರಿಣಾಮ, ಕಲ್ಲಡ್ಕ ಪೇಟೆಯ ಜನರಿಗೆ ಒಂದು ಬದಿಯಿಂದ ಇನ್ನೊಂದು ಕಡೆ ಹೋಗಬೇಕಾದರೆ ಪ್ರಯಾಸಪಡಬೇಕಾದ ಸ್ತಿತಿ ಇದೆ. ಪಾದ ಪೂರ್ತಿ ಕೆಸರಲ್ಲಿ ಹೂತುಹೋಗಿ, ಚಪ್ಪಲಿಯನ್ನು ಕೈಯಿಂದ ತೆಗೆದುಕೊಳ್ಳುವ ವೇಳೆ ಕೈ ಕೂಡ ಕೆಸರಾಗುವ ಸನ್ನಿವೇಶವೀಗ ಕಲ್ಲಡ್ಕದಲ್ಲಿ ಕಂಡುಬಂದಿದೆ.
ಕಲ್ಲಡ್ಕ ಫ್ಲೈಓವರ್ ಅಡಿಯಲ್ಲಿ ವಿಶಾಲವಾದ ಜಾಗವಿದ್ದರೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಲ್ಲಿ ಯಾವುದೇ ವಾಹನಗಳನ್ನೂ ನಿಲ್ಲಿಸಲು ಅವಕಾಶ ಮಾಡಿಲ್ಲ. ಬದಲಾಗಿ ಉದ್ದಕ್ಕೂ ಮಣ್ಣು ಹಾಕಿ, ಅದಕ್ಕೆ ವಾಹನಗಳು ಪ್ರವೇಶಿಸದಂತೆ ವ್ಯವಸ್ಥೆ ಮಾಡಿದೆ. ಇದೀಗ ಇಲ್ಲಿ ಹಾಕಿದ ಮಣ್ಣು ಹೊರಚೆಲ್ಲಿ, ರಸ್ತೆಯ ಮಧ್ಯಭಾಗಕ್ಕೆ ಬಂದಿದೆ. ಇದರಿಂದ ವಾಹನ ಸವಾರರೂ ಸಮಸ್ಯೆಗೊಳಗಾಗಿದ್ದು, ನಡೆದುಕೊಂಡು ಒಂದು ಬದಿಯಿಂದ ಇನ್ನೊಂದು ಕಡೆ ಹೋಗಲು ಸಾಧ್ಯವೇ ಆಗದ ಪರಿಸ್ಥಿತಿ ಇದೆ. ತಮ್ಮ ಎದುರುಬದಿಗೆ ಹೋಗಲು ಸುತ್ತುಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆ, ಕಾಲೇಜುಗಳು ಇರುವ ಈ ಪರಿಸರದಲ್ಲಿ ಮಕ್ಕಳೂ ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ.

s a result of the pile of mud being placed at the bottom of the flyover, the people of Kalladka town are having a hard time moving from one side to the other. A situation has now been witnessed in Kalladka where their feet are completely buried in mud and even their hands get muddy when they take their slippers.PHOTO: VARUN KALLADKA


Be the first to comment on "Kalladka: ಫ್ಲೈಓವರ್ ತಳಭಾಗದಲ್ಲಿ ಮಣ್ಣಿನ ರಾಶಿ, ಕಲ್ಲಡ್ಕ ಕೆಸರುಮಯ, ರಸ್ತೆ ದಾಟಲೂ ಸಂಕಷ್ಟ"