MANGALORE CRIME NEWS: OLX App ಬಳಸಿಕೊಂಡು ಕಾರು ಮಾರಾಟ ವಂಚನೆ ಪ್ರಕರಣ ಆರೋಪಿ ಬಂಧಿಸಿದ ಮಂಗಳೂರು ಪೊಲೀಸರು: ಈತನ ಬಳಿ 21 ಬ್ಯಾಂಕ್ ಅಕೌಂಟ್, 8 ಸಿಮ್ – ವಿವರಗಳು ಇಲ್ಲಿವೆ

ಮಂಗಳೂರು: ಮಂಗಳೂರು ನಗರ ಪೊಲೀಸರು OLX App ಬಳಸಿಕೊಂಡು ಕಾರು ಮಾರಾಟದಲ್ಲಿ ವಂಚನೆ ಎಸಗಿರುವ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತ ಇಂಥ 80 ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. 8 ಸಿಮ್ ಕಾರ್ಡ್, 21 ಬ್ಯಾಂಕ್ ಅಕೌಂಟ್ ಗಳನ್ನು ಹೊಂದಿದ್ದ ಈತ ಬೃಹತ್ ಪ್ರಮಾಣದ ಸೈಬರ್ ವಂಚನೆ ಎಸಗಿರುವ ಕುರಿತು ಮಾಹಿತಿಯನ್ನು ಪೊಲೀಸರು ಪ್ರಕಟಣೆಯಲ್ಲಿ ನೀಡಿದ್ದಾರೆ.

ಆರೋಪಿಯ ಹೆಸರು ರವಿಚಂದ್ರ ಮಂಜುನಾಥ ರೇವಣ್ ಕರ್. ವಯಸ್ಸು ಕೇವಲ 29. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ನಿವಾಸಿ. ಈತನನ್ನು ಬಂಧಿಸಿದವರು ಮಂಗಳೂರು ಸಿಟಿ ಸೆಂಟ್ರಲ್ ಕ್ರೈಮ್ ಪೊಲೀಸರು.

ಈ ಕುರಿತು ಮಂಗಳೂರು ಸೆನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 28/2025 ಕಲಂ 66(ಸಿ) 66(ಡಿ) ಐಟಿ ಕಾಯ್ದೆ,  318(4),3(5),112 ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲುಗೊಂಡಿದೆ.

ರವಿಚಂದ್ರ ಮಂಜುನಾಥ  OLX  APP ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ  ರೂ,2,50,000 ಹಣ ಪಡೆದು ವಂಚನೆ ಮಾಡಿದ್ದು,  ಈ ಬಗ್ಗೆ  ದಿನಾಂಕ: ಜೂನ್ 28ರಂದು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ತನಿಖೆ ಕೈಗೊಂಡು OLX  APP  ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ  ಹಣ ಪಡೆದು ವಂಚನೆ ಮಾಡಿದ್ದ ಆರೋಪಿತನ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿ, ಆರೋಪಿ ಹೊಸಪೇಟೆಯಲ್ಲಿರುವ ಬಗ್ಗೆ ಮಾಹಿತಿ ತಿಳಿದುಬಂತು. ಕೂಡಲೇ ಬೇರೆ ಪ್ರಕರಣದಲ್ಲಿ ಹೊಸಪೇಟೆ ಹತ್ತಿರ  ಆರೋಪಿ ಪತ್ತೆ ಕರ್ತವ್ಯದ್ದಲ್ಲಿದ್ದ ಸೆನ್ ಪೊಲೀಸ್ ಠಾಣಾ ತನಿಖಾ ತಂಡವನ್ನು ಹೊಸಪೇಟೆಗೆ ಕಳುಹಿಸಿ ಆರೋಪಿತ ರವಿಚಂದ್ರ ಮಂಜುನಾಥ ರೇವಣಕರ ನನ್ನು ವಶಕ್ಕೆ ಪಡೆದು  ಸೆನ್ ಪೊಲೀಸ್‍ ಠಾಣೆಗೆ ಕರೆದುಕೊಂಡು  ಬಂದು ವಿಚಾರಣೆ ನಡೆಸಲಾಯಿತು.

8 ಸಿಮ್, 21 ಬ್ಯಾಂಕ್ ಅಕೌಂಟ್!!!!

ತನಿಖೆಯ ವೇಳೆ  ಆರೋಪಿ ವಿವಿಧ ಬ್ಯಾಂಕ್ ಗಳಲ್ಲಿ  ಒಟ್ಟು 21 ಬ್ಯಾಂಕ್ ಖಾತೆಗಳುನ್ನು ಹೊಂದಿದ್ದು,  ಹಾಗೂ 08 ಸಿಮ್ ಕಾರ್ಡ್‍ ಗಳು ಬಳಕೆ ಮಾಡಿದ್ದು, ಕಂಡುಬಂದಿರುತ್ತದೆ. 08 ಮೊಬೈಲ್ ನಂಬ್ರ ಗಳ ಮೇಲೆ 80 ಕ್ಕೂ ಹೆಚ್ಚಿನ ಸೈಬರ್ ವಂಚನೆ  ದೂರುಗಳು  ದಾಖಲಾಗಿರುವುದು  ತಿಳಿದುಬಂತು. ಆರೋಪಿ ಕಳೆದ 03 ವರ್ಷಗಳಿಂದ OLX  APP  ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ  ಹಣ ಪಡೆದು ವಂಚನೆ  ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ತಾನು ಉಪಯೋಗಿಸುತ್ತಿದ್ದ ಮೊಬೈಲ್ ನ್ನು  ಕೆಲವು ದಿನಗಳ ಮಟ್ಟಿಗೆ  ಇಟ್ಟುಕೊಂಡು ಅದನ್ನು ಮಾರಾಟ ಮಾಡುತ್ತಿದ್ದು, ಹೊಸ ಸಿಮ್‍ ಗಳನ್ನು ಉಪಯೋಗಿಸುತ್ತಿರುವುದು ಕಂಡುಬಂದಿರುತ್ತದೆ.ಕಾರ್ಯಾಚರಣೆಯನ್ನು ಮಂಗಳೂರು ನಗರ ಸೆನ್  ಕ್ರೈಂ ಪೊಲೀಸ್ ಠಾಣಾ ಅಧಿಕಾರಿ  ಮತ್ತು  ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಸಲಾಯಿತು.

Ravichandra Manjunath Revannakar (29), a resident of Banavasi in Uttara Kannada, has been arrested by Mangaluru City Central Crime Police for allegedly duping a complainant of ₹2.5 lakh by falsely offering a car for sale on OLX.The case (Crime No. 28/2025) was registered under sections 66(C) and 66(D) of the IT Act, along with IPC sections 318(4), 3(5), and 112. Based on a lead that the accused was in Hosapete, a police team from Mangaluru was dispatched and took him into custody.During interrogation, it was found that the accused maintained 21 bank accounts and had used eight different SIM cards, many of which were linked to more than 80 cyber fraud complaints. Police revealed that he had been running this OLX scam for over three years, frequently switching phones and SIMs to evade detection.Ravichandra was produced before the court on Saturday. The operation was led by the Central Crime Station team under the guidance of senior officials

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "MANGALORE CRIME NEWS: OLX App ಬಳಸಿಕೊಂಡು ಕಾರು ಮಾರಾಟ ವಂಚನೆ ಪ್ರಕರಣ ಆರೋಪಿ ಬಂಧಿಸಿದ ಮಂಗಳೂರು ಪೊಲೀಸರು: ಈತನ ಬಳಿ 21 ಬ್ಯಾಂಕ್ ಅಕೌಂಟ್, 8 ಸಿಮ್ – ವಿವರಗಳು ಇಲ್ಲಿವೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*