ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ರೋಬೋಟಿಕ್ ಕೋಡಿಂಗ್ ತರಗತಿ ಉದ್ಘಾಟನೆ ನಡೆಯಿತು.


ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ ಗುಡ್ ಫಾರ್ ಗುಡ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಹಳೆ ಬೇರಿನ ಆಧಾರದಿಂದ ಹೊಸ ಚಿಗುರಿನೆಡೆಗೆ ವೈಜ್ಞಾನಿಕವಾಗಿ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ರೋಬೋಟಿಕ್ ತಯಾರಿಕ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದರು. ಮಾನವ ನಿರ್ಮಿತ ರೋಬೋಟ್ ಗೆ ಚಾಲನೆ ನೀಡುವುದರ ಮೂಲಕ, ರೋಬೋಟಿಕ್ ಕೋಡಿಂಗ್ ತರಬೇತಿ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಡ್ರೀಮ್ ಕಿಟ್ ಕೋ ಫೌಂಡರ್ ಮತ್ತು ಪ್ರೊಡಕ್ಟ್ ಡಿಸೈನರ್ ಆಕರ್ಷ್ ಶೆಟ್ಟಿ, ಟ್ರೈನಿಂಗ್ ಮ್ಯಾನೇಜರ್ ಶ್ರವಣ್ ಯು, ಟ್ರೈನರ್ ಶ್ರೇಯಸ್, ಗುಡ್ ಫಾರ್ ಗುಡ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಕ್ಷಯ್, ಗುಡ್ ಫಾರ್ ಗುಡ್ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ಸತ್ಯರಾಜ್ ಕಾರ್ಯನಿರ್ವಹಣಾಧಿಕಾರಿ ಸಚಿತ್, ಪವನ್ ರೈ, ಡಾ. ಕಮಲ ಪ್ರಭಾಕರ ಭಟ್ ಹಾಗೂ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ತನ್ಮಯಿ ರೈ ನಿರೂಪಿಸಿ,ಪ್ರಾಪ್ತಿ ಸ್ವಾಗತಿಸಿ ಸಾನ್ವಿ ವಂದಿಸಿದರು.


Be the first to comment on "ಕಲ್ಲಡ್ಕ: ರೋಬೋಟಿಕ್ ಕೋಡಿಂಗ್ ತರಗತಿ ಉದ್ಘಾಟನೆ"