ಮಂಗಳೂರು: ನಗರದ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸಸಿಗಳನ್ನು ನೆಡುವುದರೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಇಎಂ ಅನುದಾನಿತ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅಪರ್ಣ ಇವರು ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೊಂದಿದ್ದು ವಿದ್ಯಾರ್ಥಿಗಳಿಗೆ ಶಾಲೆ ಎರಡನೇ ಮನೆಯಾಗಿದೆ. ಸ್ವಚ್ಛತೆಯನ್ನು ಮನೆ ಹಾಗೂ ಶಾಲೆಯಲ್ಲಿ ಕಾಪಾಡಿಕೊಂಡು ಹೋಗಬೇಕೆಂದು ಮನವರಿಕೆ ಮಾಡಿದರು ಹಾಗೂ ಪ್ಲಾಸ್ಟಿಕ್ ಭೂಮಿಗೆ ಮಾರಕವಾಗಿದ್ದು ಪುನರ್ ಬಳಕೆಯ ಮೂಲಕ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಬೇಕೆಂದು ತಿಳಿಸಿದರು.
ಮಂಗಳೂರಿನ ಬೀಟ್ ಪೊಲೀಸ್ ಅರಣ್ಯ ಅಧಿಕಾರಿಯಾದ ಶ್ರೀಮತಿ ವೀಣಾ ಅವರು ನಾವು ಹೇಗೆ ಉತ್ತಮ ರೀತಿಯಲ್ಲಿ ಬೆಳೆದಿದ್ದೇವೋ ಹಾಗೆ ಗಿಡಗಳನ್ನು ಬೆಳೆಯಬೇಕು. ಸಸಿಗಳ ಜೊತೆ ಮಾತನಾಡುವುದರ ಮೂಲಕ ಅವುಗಳ ಪೋಷಣೆಯಲ್ಲಿ ತೊಡಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಭಾರತೀ ಸಮೂಹ ಸಂಸ್ಥೆಯ ಸೇವಾ ಸಮಿತಿಯ ಕಾರ್ಯಾಲಯ ಕಾರ್ಯದರ್ಶಿಗಳಾದ ಶ್ರೀ ಎಂ ಟಿ ಭಟ್ ಇವರು ಗಿಡ ನೆಡುವುದು ಪುಣ್ಯದ ಕೆಲಸ. ಪ್ರತಿಯೊಬ್ಬರೂ ಗಿಡ ನೆಟ್ಟು ಪರಿಸರ ಸಂರಕ್ಷಣೆಯಲ್ಲಿ ಪಾತ್ರ ವಹಿಸಬೇಕೆಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕರಾದ ಶ್ರೀ ಗಿರೀಶ್ ಎಂ ಹಾಗೂ ಪ್ರಾಂಶುಪಾಲರಾದ ಸಂದೀಪ್ ಆಚಾರ್ಯ ಅವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕುಮಾರಿ ವರ್ಷಿಣಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ರಿವಾನಿ ಸ್ವಾಗತಿಸಿ, ಕುಮಾರಿ ಪೂರ್ವಿ ವಂದಿಸಿದರು.
Be the first to comment on "ನಂತೂರು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ : ವನಮಹೋತ್ಸವ ಆಚರಣೆ"