ಬ್ರಹ್ಮಶ್ರೀ ನಾರಾಯಣಗುರುಗಳು ಸಾಮಾಜಿಕ ಕ್ರಾಂತಿಯ ದಾರಿದೀಪವಾಗಿದ್ದರು ಎಂದು ಪುರೋಹಿತರಾದ ಸಾಯಿ ಶಾಂತಿ ತಿಳಿಸಿದರು.
ಬಂಟ್ವಾಳ ಯುವವಾಹಿನಿ ಘಟಕದ ದ್ವಿತೀಯ ಉಪಾಧ್ಯಕ್ಷರಾದ ನಾಗೇಶ್ ನೈಬೆಲು ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 48 ನೇ ಮಾಲಿಕೆಯಲ್ಲಿ ಮಾತನಾಡಿದರು.
ಭಾರತದ ಇತಿಹಾಸದಲ್ಲಿ ಸಾಮಾಜಿಕ ಕ್ರಾಂತಿಗಾರರ ಪಾತ್ರವು ಅಪಾರವಾಗಿದೆ. ಅಂಥ ಮಹಾನ್ ವ್ಯಕ್ತಿಗಳ ಪೈಕಿ ನಾರಾಯಣಗುರು ಅವರು ಪ್ರಮುಖ ವ್ಯಕ್ತಿತ್ವದವರು. ಅವರು ಕೇವಲ ಧಾರ್ಮಿಕ ನಾಯಕನಲ್ಲ, ಒಂದು ಕ್ರಾಂತಿಕಾರಿ ಚಿಂತನೆಯ ದಾರಿದೀಪರೂ ಆಗಿದ್ದರು. ತಮ್ಮ ಚಿಂತನೆ, ಕಾರ್ಯ ಮತ್ತು ತ್ಯಾಗದಿಂದ ಅವರು ಕೇರಳವನ್ನು ಮಾತ್ರವಲ್ಲ, ಇಡೀ ಭಾರತೀಯ ಸಮಾಜವನ್ನು ಉಜ್ವಲ ಬೆಳಕಿನಲ್ಲಿ ಮುನ್ನಡೆಸಿದರು. ಅವರ ಕಾಲದಲ್ಲಿ, ಅಸ್ಪೃಶ್ಯತೆ, ಅಸಮಾನತೆ ಇವು ಜನಸಾಮಾನ್ಯರ ಜೀವನದ ಭಾಗವಾಗಿದ್ದವು. ತಳವರ್ಗದ ಜನರು ದೇವಾಲಯಗಳಿಗೆ ಹೋಗಲಾರದಂತಹ ಅನ್ಯಾಯಪೂರ್ಣ ಪರಿಸ್ಥಿತಿಯಲ್ಲಿ, ನಾರಾಯಣಗುರುರು ಅವರಿಗಾಗಿ ದೇವಾಲಯಗಳನ್ನು ನಿರ್ಮಿಸಿದರು. ಇದೊಂದು ಬೃಹತ್ ಸಾಮಾಜಿಕ ಕ್ರಾಂತಿಯ ಆರಂಭವಾಗಿತ್ತು ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಯುವವಾಹಿನಿ ಘಟಕದ ಆರೋಗ್ಯ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷರಾದ ರಾಜೇಶ್ ಸುವರ್ಣ, ಅರುಣ್ ಮಹಾಕಾಳಿಬೆಟ್ಟು, ಪ್ರೇಮನಾಥ್ ಕರ್ಕೇರ, ಶಿವಾನಂದ ಎಂ, ಸದಸ್ಯರಾದ ಪ್ರಶಾಂತ್ ಏರಮಲೆ, ಯತೀಶ್ ಬೊಳ್ಳಾಯಿ, ವಿಘ್ನೇಶ್ ಬೊಳ್ಳಾಯಿ, ಯಶೋಧರ ಕಡಂಬಳಿಕೆ, ಅಜಯ್ ನರಿಕೊಂಬು, ಹರೀಶ್ ಅಜೆಕಲಾ, ಬ್ರಿಜೇಶ್ ಕಂಜತ್ತೂರು, ಆನಂದ್ ಬಿ.ಸಿರೋಡ್, ನಾಗೇಶ್ ಏಲಬೆ, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಮೊದಲಾಗಿ ನಡೆದ ಭಜನಾ ಸಂಕೀರ್ತನಾ ಸೇವೆಯಲ್ಲಿ ಹಾರ್ಮೋನಿಯಂ ವಾದಕರಾಗಿ ರಾಜೇಶ್ ಅಮ್ಟೂರು ಮತ್ತು ತಬಲಾ ದಲ್ಲಿ ಸುದರ್ಶನ್ ಜ್ಯೋತಿಗುಡ್ಡೆ ಸಹಕರಿಸಿದರು.ನಾರಾಯಣಗುರು ತತ್ವಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.
Be the first to comment on "ನಾರಾಯಣಗುರುಗಳು ಸಾಮಾಜಿಕ ಕ್ರಾಂತಿಯ ದಾರಿದೀಪ: ಸಾಯಿ ಶಾಂತಿ ಕೋಕಾಲಗುತ್ತು."