ಬಂಟ್ವಾಳದ ನಾವೂರಿನ ಮಾತೃ ಭೂಮಿ ಸೇವಾ ಸಂಘ ವತಿಯಿಂದ ವನಮಹೋತ್ಸವ ಪ್ರಯುಕ್ತ, ಗ್ರಾಮದಲ್ಲಿ ಗಿಡ ಹಂಚುವ ಹಾಗೂ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಾಲಾಯಿತು.
ಸಮಾಜದಲ್ಲಿ ಪರಿಸರ ರಕ್ಷಣೆಯ ಮಹತ್ವ ಹಾಗೂ ಪರಿಸರ ಜಾಗೃತಿಯ ದೂರದೃಷ್ಟಿ ಚಿಂತನೆಯಲ್ಲಿ “ಮನೆಗೊಂದು ಮರ” ಯೋಜನೆಯಡಿಯಲ್ಲಿ ಗಿಡದ ಪೋಷಣೆಯ ಸಂಪೂರ್ಣ ರಕ್ಷಣೆಯ ಜವಬ್ದಾರಿಯ ಮನವರಿಕೆಯೊಂದಿಗೆ ಗ್ರಾಮಸ್ಥರ ಮನೆಗೆ ಭೇಟಿ ನೀಡಿ ಗಿಡ ನೀಡುವ ಮೂಲಕ ಹಾಗೂ ಅಂಗನವಾಡಿ ಕೇಂದ್ರದ ಸುತ್ತಮುತ್ತ ಸಂಘದ ಸಂಘಟಕರು ಗಿಡ ನೆಡುವ ಮೂಲ ವನಮಹೋತ್ಸವನ್ನು ಆಚರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಎಕ್ಕುಡೇಲು ಸಂಘಟಕರಾದ ಶ್ರೀ ಹರಿಕೃಷ್ಣ ಪೊರ್ಕಳ,ವರುಣ್ ಸಿಂತಾನಿಕಟ್ಟೆ,ಹರೀಶ್ ಕೆಲ್ಲೆರ್ ಮಾರ್, ಅಕ್ಷಯ್ ಸೂರ,ತಾರಾನಾಥ ಮಲೆಬಾವು, ನಿರ್ದೇಶಕರಾದ ಸುರೇಶ್ ಎಸ್.ನಾವೂರು ಉಪಸ್ಥಿತಿ ಇದ್ದರು. ಸ್ಥಳೀಯ ಸಮುದಾಯದೊಳಗಿನವರು ಪ್ರಕೃತಿಯೊಂದಿಗೆ ಆಂತರಿಕ ಸಂಬಂಧವನ್ನು ಬೆಳೆಸುವಂತೆ ಪ್ರೇರಣೆ ನೀಡುವ ಈ ದೂರದೃಷ್ಟಿಯ ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.ಅವರು ಭವಿಷ್ಯದಲ್ಲಿಯೂ ಇಂತಹ ಹಸಿರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಲವು ಮಂದಿ ಆಸಕ್ತಿ ತೋರಿಸಿದರು.
Be the first to comment on "ಮಾತೃಭೂಮಿ ಸೇವಾ ಸಂಘ ನಾವೂರು ವತಿಯಿಂದ ಪರಿಸರ ಸಂರಕ್ಷಣೆ ಸಂದೇಶ"