ಬಂಟ್ವಾಳ ತಾಲೂಕಿನಲ್ಲಿ ಶುಕ್ರವಾರ ವ್ಯಾಪಕ ಮಳೆಯಾಗಿದ್ದು, ನದಿ ನೀರಿನಲ್ಲಿ ಸ್ವಲ್ಪ ಏರಿಕೆ ಕಂಡಿದೆ. ಬಂಟ್ವಾಳ ನೇತ್ರಾವತಿ ನೀರಿನ ಅಪಾಯದ ಮಟ್ಟ 7.5 ಮೀಟರ್ ಆಗಿದ್ದು, ಶುಕ್ರವಾರ ಬೆಳಗ್ಗೆ 4.5 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದ ನೇತ್ರಾವತಿ ಸಂಜೆ 5.9 ಮೀಟರ್ ಎತ್ತರಕ್ಕೆ ತಲುಪಿದೆ.
ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಮೆದು ಎಂಬಲ್ಲಿ ಉಮಾವತಿ ಅವರ ವಾಸದ ಮನೆಗೆ ಪಕ್ಕದ ಗುಡ್ಡ ಜರಿದು ಬಾಗಶಃ ಹಾನಿಯಾಗಿದ್ದು, ಮನೆಯವರನ್ನು ಅವರ ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಲಾಯಿತು. ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ ಎಂದು ಕಂದಾಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಕಡೇಶ್ವಾಲ್ಯ ಗ್ರಾಮದ ಸೇರಾ ತನಿಯಪ್ಪ ಅವರ ಮನೆಯ ಪಕ್ಕದ ಗುಡ್ಡೆಯ ಮಣ್ಣು ಕುಸಿದಿದೆ,.
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಜುಮಾದಿಗುಡ್ಡೆ ಇಬ್ರಾಹಿಂ ಅವರ ಮನೆ ಕುಸಿದಿದೆ. ಪುದು ಗ್ರಾಮದ ಹೊಳೆಬದಿ ಎಂಬಲ್ಲಿ ಹಾಜಿರ ಮನೆಗೆ ತಾಗಿದ ಮಣ್ಣ ಗುಡ್ಡೆ ಹಾಗೂ ಮರ ಕುಸಿದು ಬೀಳುವ ಸಾಧ್ಯತೆ ಇದ್ದು ಈ ಬಗ್ಗೆ ಮನೆಯವರಿಗೆ ಸ್ಥಳಾಂತರ ಆಗುವ ಬಗ್ಗೆ ಸೂಚಿಸಲಾಗಿದೆ. ಬಂಟ್ವಾಳ ತಾಲ್ಲೂಕು ನರಿಕೊಂಬು ಗ್ರಾಮದ ಇಬ್ರಾಹಿಂ ಅವರ ಮನೆಯ ಹಿಂದಿನ ಗುಡ್ಡ ಕುಸಿಯುವ ಭೀತಿ ಇದೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. ಅಮ್ಮುಂಜೆ ಗ್ರಾಮದ ಸುಲೋಚನ ಎಂಬವರ ಮನೆಯ ಮೇಲ್ಛಾವಣಿ ಕುಸಿದಿದೆ,. ವಿಟ್ಲ ಮುಡ್ನೂರು ಗ್ರಾಮದ ನೂಜಿ ನಿವಾಸಿ ಹಾಜಿರಾ ಅವರ ಮನೆಯ ಮಣ್ಣಿನ ಗೋಡೆ ಕುಸಿದು ಹಾನಿಯಾಗಿದೆ. ಕರೊಪಾಡಿ ಗ್ರಾಮ ದ ಒಡಿಯೂರು ನಿವಾಸಿ ಹರಿನಾಕ್ಷಿ ಅವರ ಹಂಚಿನ ಮನೆಯ ಚಾವಣಿ ಕುಸಿದು ತೀವ್ರ ಹಾನಿಯಾಗಿದೆ. ಕಂಬಳಬೆಟ್ಟು ಶಾಂತಿ ನಗರ ನಿವಾಸಿ ನೆಬಿಸ ವಾಸದ ಮನೆಗೆ ಭಾಗಷ ಹಾನಿಯಾಗಿದೆ. ಮಾಣಿಲ ಗ್ರಾಮದ ಕೊಂದಲಕೋಡಿ ಗಿರೀಶ ಅವರ ಮನೆಯ ಹಿಂಬದಿಗೆ ಗುಡ್ಡ ಕುಸಿದು ಹಾನಿಯಾಗಿದೆ.
Be the first to comment on "ಬಂಟ್ವಾಳ ತಾಲೂಕಿನಲ್ಲೂ ಗಾಳಿಮಳೆ, ವ್ಯಾಪಕ ಹಾನಿ, ನೇತ್ರಾವತಿ ನೀರಿನ ಮಟ್ಟ ಏರಿಕೆ"