ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಗಳಲ್ಲಿ ಶತಮಾನಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬಂದ ಶ್ರಾವಣ ಮಾಸದ ಯಕ್ಷಗಾನ ತಾಳಮದ್ದಲೆ ಸೇವೆ ಈ ವರ್ಷ ಜುಲೈ 25ರಿಂದ ಆಗಸ್ಟ್ 23ವರೆಗೆ ನಡೆಯಲಿದೆ ಎಂದು ದೇವಳ ಪ್ರಕಟಣೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಯಕ್ಷಗಾನ ಸಂಘದವರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದ್ದಾರೆ. ಸಂಜೆ 6.30ರಿಂದ 9.30ವರೆಗೆ ಇರಲಿದೆ. ಸೇವೆಯಲ್ಲಿ ಭಾಗವಹಿಸಲು ಇಚ್ಛಿಸುವವರು ತಮಗೆ ಅನುಕೂಲವಾದ ಕನಿಷ್ಠ 5 ದಿನಗಳನ್ನು ತಿಳಿಸಿದಲ್ಲಿ ಒಂದು ದಿನವನ್ನು ಆಯ್ಕೆ ಮಾಡಿ ತಿಳಿಸಲಾಗುವುದು. ಯಾವುದೇ ವೆಚ್ಚವನ್ನು ನೀಡಲಾಗುವುದಿಲ್ಲ. ಯಕ್ಷಗಾನ ಸಾಹಿತ್ಯ ಲಭ್ಯವಿರುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9071923352 ಅಥವಾ 948139049 ಸಂಪರ್ಕಿಸಲು ಕೋರಲಾಗಿದೆ.
Be the first to comment on "ಬಂಟ್ವಾಳ: ಶ್ರಾವಣ ಮಾಸದ ಯಕ್ಷಗಾನ ತಾಳಮದ್ದಲೆ ಸೇವೆಗೆ ಆಹ್ವಾನ"