ಬಂಟ್ವಾಳ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಂದೀಚೆಗೆ ಗಾಳಿ ಮಳೆಯಾಗುತ್ತಿದ್ದು, ವ್ಯಾಪಕ ಹಾನಿ ಸಂಭವಿಸಿದೆ. ಕಾವಳ ಪಡೂರು ಗ್ರಾಮದ ಕೈಲಾರು ಎಂಬಲ್ಲಿ ಅಬೂಬಕ್ಕರ್ ಸಿದ್ದಿಕ್ ಹಾಗೂ ಅಶ್ರಫ್ ರವರ ಮನೆಯ ಪಕ್ಕದ ಆವರಣ ಗೋಡೆ ಕುಸಿದಿದ್ದು ಯಾವುದೇ ಹಾನಿಯಾಗಿರುವುದಿಲ್ಲ. ಅಮ್ಮುಂಜೆ ಗ್ರಾಮದ ಸುಮಲತಾ ಎಂಬವರ ತಡೆಗೋಡೆ ಕುಸಿದು ಮನೆಯ ಅಡಿಪಾಯ ಭಾಗಶಃ ಹಾನಿ ಆಗಿರುತ್ತದೆ. ಮಂಚಿ ಗ್ರಾಮದ ಕುಕ್ಕಾಜೆ ಪತ್ತುಮುಡಿ ಹನೀಫ್ ರವರ ಮನೆ ಬದಿ ಕಾಂಪೌಂಡ್ ಕುಸಿದಿರುತ್ತದೆ. ಬಿಮೂಡ ಗ್ರಾಮದ ಗಂಗಾಧರ ಅವರ ಮನೆಯ ಮೇಲೆ ಮರ ಬಿದ್ದಿದ್ದು ಆಂಶಿಕ ಹಾನಿಯಾಗಿರುತ್ತದೆ.ಮರವನ್ನು ತೆರವುಗೊಳಿಸುವ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿಯನ್ನು ನೀಡಲಾಯಿತು. ಕಳ್ಳಿಗೆ ಗ್ರಾಮದ ಜೂಲಿಯನ ಪಿಂಟೋ ಎಂಬವರ ಮನೆಗೆ ಮರ ಬಿದ್ದು ಹಾನಿ ಆಗಿರುತ್ತದೆ. ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ. ಪಂಜಿಕಲ್ಲು ಗ್ರಾಮದ ಪುಂಚೋಡಿ ಎಂಬಲ್ಲಿ ರಮೇಶ ಬಿನ್ ಬಾಬು ರವರ ಮನೆಯ ಬದಿಯಲ್ಲಿರು ಗುಡ್ಡ ಜರಿದಿರುತ್ತದೆ.ಮನೆಗೆ ಯಾವುದೇ ಹಾನಿ ಆಗಿರುವುದಿಲ್ಲ.

ಮಂಚಿ ಗ್ರಾಮದ ಕುಕ್ಕಾಜೆ ಪತ್ತುಮುಡಿ ಹನೀಫ್ ರವರ ಮನೆ ಬದಿ ಕಾಂಪೌಂಡ್ ಕುಸಿದಿರುತ್ತದೆ

ಬಿಮೂಡ ಗ್ರಾಮದ ಗಂಗಾಧರ ಅವರ ಮನೆಯ ಮೇಲೆ ಮರ ಬಿದ್ದಿದ್ದು ಆಂಶಿಕ ಹಾನಿಯಾಗಿರುತ್ತದೆ.ಮರವನ್ನು ತೆರವುಗೊಳಿಸುವ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿಯನ್ನು ನೀಡಲಾಯಿತು.

ಪಂಜಿಕಲ್ಲು ಗ್ರಾಮದ ಪುಂಚೋಡಿ ಎಂಬಲ್ಲಿ ರಮೇಶ ಬಿನ್ ಬಾಬು ರವರ ಮನೆಯ ಬದಿಯಲ್ಲಿರು ಗುಡ್ಡ ಜರಿದಿರುತ್ತದೆ.ಮನೆಗೆ ಯಾವುದೇ ಹಾನಿ ಆಗಿರುವುದಿಲ್ಲ.
Be the first to comment on "Bantwal: ಬಂಟ್ವಾಳ ತಾಲೂಕಿನಲ್ಲಿ ಭಾರಿ ಗಾಳಿ ಮಳೆ, ಹಾನಿ"