ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ಸಮೀಪ ಪಾಣೆಮಂಗಳೂರಿನ ನೆಹರೂನಗರ ಬಳಿಯ ಹೋಟೆಲೊಂದರ ಮುಂಭಾಗ ಕೆಎಸ್ಸಾರ್ಟಿಸಿ ಬಸ್ಸೊಂದು ಸ್ಕೂಟರ್ ಗೆ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ್ದಾರೆ.
ಮಂಗಳೂರು ನಿವಾಸಿ ಆಲಿಸ್ಟರ್ ಡಿಸೋಜ (24) ಭಾನುವಾರ ರಾತ್ರಿ ನಡೆದ ಈ ಘಟನೆಯಲ್ಲಿ ಸಾವನ್ನಪ್ಪಿದವರು. ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಪಾಣೆಮಂಗಳೂರು ಗ್ರಾಮದ ನೆಹರೂ ನಗರದ ಹೋಟೆಲ್ ಮುಂಭಾಗದ ಬೆಂಗಳೂರು-ಮಂಗಳೂರು ರಾಷ್ರ್ಟೀಯ ಹೆದ್ದಾರಿ ರಸ್ತೆಯ ಎಡಬದಿಯಲ್ಲಿ ಸ್ಕೂಟರ್ ಹೋಗುತ್ತಿದಂತೆ, ಬಿ ಸಿ ರೋಡ್ ಕಡೆಯಿಂದ ಕಲ್ಲಡ್ಕ ಕಡೆಗೆ ಹೋಗುತ್ತಿದ್ದ ಕೆ ಎಸ್ ಆರ್ ಟಿ ಸಿ ಅಂಬಾರಿ ಬಸ್ ಚಾಲಕ ತನ್ನ ಎದುರುಗಡೆಯಿಂದ ಹೋಗುತ್ತಿದ್ದ ಟೆಂಪೂ ಟ್ರಾವೆರ್ಲ್ ವಾಹನವೊಂದನ್ನು ಓವರ್ ಟೆಕ್ ಮಾಡಿಕೊಂಡು ರಸ್ತೆ ತೀರಾ ಬಲಬದಿಗೆ ಬಂದು ಅಲಿಸ್ಟರ್ ಡಿಸೋಜ್ ಚಲಾಯಿಸುತ್ತಿದ್ದ ಸ್ಕೂಟರ್ ನ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ನಿಂದ ಎಸೆಯಲ್ಪಟ್ಟು ಕಾಂಕ್ರಿಟ್ ರಸ್ತೆಗೆ ಬಿದ್ದು, ತೀವೃ ಗಾಯಗೊಂಡಿದ್ದಾರೆ. ಕೂಡಲೇ ಚಿಕಿತ್ಸೆ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿ ತಿಳಿಸಿದ್ದಾರೆ.
Be the first to comment on "ಹೆದ್ದಾರಿಯಲ್ಲಿ ಅಪಘಾತ: ಸ್ಕೂಟರ್ ಗೆ ಡಿಕ್ಕಿಯಾದ ಕೆಎಸ್ಸಾರ್ಟಿಸಿ ಬಸ್, ಸವಾರ ಮೃತ್ಯುವಶ"