ಮೊಡಂಕಾಪು ಸಮೀಪ ಪಲ್ಲಮಜಲುವಿನಲ್ಲಿ ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರ (ರಿ), ಶ್ರೀ ಮಹಾಪವಮಾನ ಯಾಗ ಸಮಿತಿ ವತಿಯಿಂದ ಮೇ 16ರಿಂದ ಮೂರು ದಿನಗಳ ಕಾಲ ಆಯೋಜಿಸಲಾದ ಮಹಾಪವಮಾನ ಯಾಗ ಭಾನುವಾರ ಸಂಪನ್ನಗೊಂಡಿತು.
108ಉ ಪವಮಾನ ಪಾರಾಯಣ ಸಹಿತ ಮಹಾಪವಮಾನ ಯಾಗ, 108 ಲಕ್ಷ ಶ್ರೀರಾಮ ನಾಮ ತಾರಕ ಜಪಯಜ್ಞ, ಶ್ರೀ ಆಂಜನೇಯ ದೇವರಿಗೆ ಸಹಸ್ರ ಕದಳಿ ಯಾಗ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮಗಳು ದೈವಜ್ಞ ಶಶಿಕುಮಾರ್ ಪಂಡಿತ್ ಮಾರ್ಗದರ್ಶನ ಹಾಗೂ ವಿನಾಯಕ ಕಾರಂತ ಪೌರೋಹಿತ್ಯದಲ್ಲಿ ನಡೆದವು.
ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾನಿಲ ಶ್ರೀಧಾನಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಧೀರಜ್ ಮುನಿರಾಜು, ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ಮಂಜುನಾಥ ಭಂಡಾರಿ, ಆರೆಸ್ಸೆಸ್ ಪ್ರಮುಖ ಪ್ರಕಾಶ್ ಪಿ.ಎಸ್. ಸಹಿತ ಪ್ರಮುಖರು ಆಗಮಿಸಿದ್ದರು. ಯಾಗ ಸಮಿತಿ ಅಧ್ಯಕ್ಷ ಸಂದೇಶ್ ಶೆಟ್ಟಿ ಅರೆಬೆಟ್ಟು, ಗೌರವಾಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ, ಸಂಚಾಲಕ ಸಂದೇಶ್ ಬ್ರಹ್ಮರಕೂಟ್ಲು, ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಕೋಶಾಧಿಕಾರಿ ಹರಿಪ್ರಸಾದ್ ಭಂಡಾರಿಬೆಟ್ಟು, ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರದ ಗೌರವಾಧ್ಯಕ್ಷರಾದ ರಾಕೇಶ್ ಮಲ್ಲಿ, ಸೇಸಪ್ಪ ದಾಸಯ್ಯ, ಅಧ್ಯಕ್ಷ ಗಣೇಶ್ ದಾಸ್ ಕಾಮೇರಕೋಡಿ, ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಪಲ್ಲಮಜಲು, ಪ್ರಮುಖರಾದ ಸುಲೋಚನಾ ಭಟ್, ದೇವಪ್ಪ ಪೂಜಾರಿ ಬಾಳಿಕೆ, ಪ್ರಸಾದ್ ಕುಮಾರ್ ರೈ ಸಹಿತ ಭಜನಾ ಮಂದಿರ ಸಮಿತಿ, ಮಹಾಪವಮಾನ ಯಾಗದ ವಿವಿಧ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದು, ಯಾಗದ ಯಶಸ್ಸಿಗೆ ಸಹಕರಿಸಿದರು.
Be the first to comment on "ಪಲ್ಲಮಜಲಿನಲ್ಲಿ ಮಹಾಪವಮಾನ ಯಾಗ ಸಂಪನ್ನ"