ಕರ್ಕಶ ಹಾರ್ನ್ ಗಳ ವಿರುದ್ಧ ಬಂಟ್ವಾಳ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಶುಕ್ರವಾರ ಸಂಜೆ ಬಿ.ಸಿ.ರೋಡಿನಲ್ಲಿ ಸುಮಾರು 15 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ಸಂಗ್ರಹ ಮಾಡಿದ್ದಾರೆ.
ಬಂಟ್ವಾಳ ಸಂಚಾರ ಠಾಣಾ ಪಿಎಸ್ಐ ಸುತೇಶ್ ಕೆ.ಪಿ. ಅವರ ನೇತೃತ್ವದಲ್ಲಿ ಬಿ.ಸಿ.ರೋಡಿನ ಫ್ಲೈಓವರ್ ತಳ ಭಾಗದಲ್ಲಿ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಒಂದು ಪ್ರಕರಣಕ್ಕೆ ತಲಾ 500 ರೂ.ಗಳ ದಂಡದಂತೆ ಒಟ್ಟು 7500 ರೂ. ದಂಡ ಶುಲ್ಕ ಸಂಗ್ರಹಿಸಲಾಗಿದೆ.
ಕರ್ಕಶ ಹಾರ್ನ್ ಗಳ ಮೂಲಕ ತೊಂದರೆ ನೀಡುತ್ತಿರುವ ವಾಹನಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದ್ದು, ವಾಹನ ಮಾಲಕರು ಜಾಗೃತರಾಗಿ ತಮ್ಮ ಕರ್ಕಶ ಹಾರ್ನ್ ಗಳನ್ನು ನಿಯಂತ್ರಿಸುವಂತೆ ಪೊಲೀಸರು ಎಚ್ಚರಿಸಿದ್ದಾರೆ.
Be the first to comment on "BCROAD: ಬಿ.ಸಿ.ರೋಡು: ಕರ್ಕಶ ಹಾರ್ನ್ ವಿರುದ್ಧ ಕಾರ್ಯಾಚರಣೆ; ೧೫ ಪ್ರಕರಣ ಪತ್ತೆ – BANTWALNEWS"