ಯೇಸು ಕ್ರಿಸ್ತರ ಜನನದ ೨೦೨೫ನೇ ಜುಬಿಲಿಯ ಪ್ರಯುಕ್ತ ಲೊರೆಟ್ಟೊ ಮಾತಾ ಚರ್ಚ್ ನ ವ್ಯಾಪ್ತಿಯಲ್ಲಿ, ದೇಶ ವಿದೇಶದ ವಿವಿಧ ಧರ್ಮಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಧರ್ಮ ಗುರುಗಳ ಹಾಗೂ ಧರ್ಮ ಭಗಿನಿಯರ ಸಹಮಿಲನ ಕಾರ್ಯಕ್ರಮ ಭಾನುವಾರ ನಡೆಯಿತು.
ಪ್ರಧಾನ ಧರ್ಮಗುರುಗಳಾಗಿ ವಂ. ಜೊಸ್ಸಿ ಫರ್ನಾಂಡಿಸ್ ಅವರೊಂದಿಗೆ ಸುಮಾರು ೪೫ ಧರ್ಮಗುರುಗಳು ಹಾಗೂ ಭಗಿನಿಯವರೊಂದಿಗೆ ಪವಿತ್ರ ಬಲಿಪೂಜೆಯೊಂದಿಗೆ ಆರಂಭವಾದ ಈ ಸಂಭ್ರಮ ಲೊರೆಟ್ಟೊ ಮಾತಾ ಸಂಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ಜರುಗಿತು.
ಈ ಸಮಾರಂಭದ ರೂವಾರಿ ಹಾಗೂ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಲೊರೆಟ್ಟೊ ಚರ್ಚಿನ ಧರ್ಮಗುರುಗಳಾದ ವಂದನೀಯ ಫ್ರಾನ್ಸಿಸ್ ಕ್ರಾಸ್ತಾ ಅವರು, ಯೇಸುಕ್ರಿಸ್ತರ ನಡೆನುಡಿಗಳನ್ನು ತಮ್ಮ ಜೀವನವನ್ನು ಅವರಿಗೋಸ್ಕರ ಮುಡಿಪಾಗಿಟ್ಟು ಅವರ ತತ್ವ ಸಿದ್ಧಾಂತಗಳನ್ನು ಪಾಲಿಸಿ ದೇಶ ವಿದೇಶಗಳಲ್ಲಿ ವಿವಿಧ ಧರ್ಮ ಪ್ರಾಂತ್ಯಗಳಲ್ಲಿ ಲೊರೆಟ್ಟೊ ಮಾತಾ ಪಾಲಕಿಯ ಆಶಿರ್ವಾದಗಳೊಂದಿಗೆ ಸೇವೆ ಸಲ್ಲಿಸುತ್ತಿರುವ ಧರ್ಮಗುರುಗಳು ಹಾಗೂ ಧರ್ಮ ಭಗಿನಿಯವರ ಈ ಸಹ ಮಿಲನ ಕಾರಕ್ರಮ ವಿಶೇಷತೆಗಳಿಂದ ತುಂಬಿದೆ. ಈ ಕಾರಕ್ರಮದ ಪ್ರಾಮುಖ್ಯತೆಯನ್ನು ಮನಗಂಡು ಕಾರ್ಯಕ್ರಮಗೊಸ್ಕರ ದೂರದ ಊರುಗಳಿಂದ ಆಗಮಿಸಿ ಇದರ ಸೊಬಗನ್ನು ಹೆಚ್ಚಿಸಿದೆ ಎಂದರು ಬಳಿಕ ಪ್ರತಿಯೊಬ್ಬರನ್ನು ಸ್ಮರಣಿಕೆ ನೀಡಿ ಸನ್ಮಾನಿಸಿದರು.ವೇದಿಕೆಯಲ್ಲಿ ವಂ. ಹೆರಾಲ್ಡ್ ಡಿಸೋಜ, ಸಂತ ಆಗ್ನೇಸ್ ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಮರಿಯ ರೂಪಾ, ಸಂಯೋಜಕರಾದ ಪ್ರಕಾಶ್ ವಾಸ್, ಸೂಪರಿಯರ್ ಭಗಿನಿ ಇಡೊಲಿನ್, ಮಂಡಳಿಯ ಕಾರ್ಯದರ್ಶಿಯವರಾದ ಶೈಲಾ ಬರ್ಬೊಜಾ ಸನ್ಮಾನಿತರು ವಿವರವನ್ನು ವಾಚಿಸಿದರು. ಪಾಲನಾ ಮಂಡಳಿಯ ಉಪಾಧ್ಯಾಕ್ಷರಾದ ಸಿಪ್ರಿಯಾನ್ ಡಿಸೋಜ ಸ್ವಾಗತಿಸಿದರು, ಲೆನ್ನಿ ಷೆನಾಂಡಿಸ್ ವಂದಿಸಿದರು.ಲೊರೆಟ್ಟೊ ಸಿಬಿಎಸ್ ಸಿ ಅಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂ. ಜೇಸನ್ ವಿಜೆಯ್ ಮೊನಿಸ್ ರವರು ನಿರೂಪಿದರು. ಇದೇ ಸಂದರ್ಭ ಚರ್ಚ್ ವ್ಯಾಪ್ತಿಯಲ್ಲಿ ಧರ್ಮಗುರುಗಳು, ಧರ್ಮಭಗಿನಿಯರಾಗಿ ಸೇವೆ ಸಲ್ಲಿಸಿ ನಿಧನ ಹೊಂದಿರುವವ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.
Be the first to comment on "ಲೊರೆಟ್ಟೊ ಮಾತಾ ಚರ್ಚ್ ನಲ್ಲಿ ಧರ್ಮಗುರುಗಳು, ಧರ್ಮಭಗಿನಿಯರ ಸಹಮಿಲನ"