ಕಲ್ಲಡ್ಕ ಸಮೀಪ ನೆಟ್ಲದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನಕ್ಕೆ ಕದ್ರಿ ಜೋಗಿಮಠದ ಶ್ರೀ ನಿರ್ಮಲನಾಥಜೀ ಮಹಾರಾಜ್ ಸೋಮವಾರ ಭೇಟಿ ನೀಡಿ, ಇಲ್ಲಿ ನಡೆಯಲಿರುವ ಅತಿಮಹಾರುದ್ರಯಾಗದ ಸಿದ್ಧತೆಗಳನ್ನು ವೀಕ್ಷಿಸಿದರು.
ಮೊಗರ್ನಾಡು ಸಾವಿರ ಸೀಮೆ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಮೇ ತಿಂಗಳಲ್ಲಿ ಅತಿಮಹಾರುದ್ರ ಯಾಗ ನಡೆಯಲಿದ್ದು, ಪೂರ್ವತಯಾರಿ ವೀಕ್ಷಣೆಗೆ ಕದ್ರಿ ಕದಲಿ ಜೋಗಿ ಮಠಾಧಿಶ್ವರರಾದ ಶ್ರೀ ನಿರ್ಮಲನಾಥ್ ಜೀ ಮಹಾರಾಜ್ ಆಗಮಿಸಿದ್ದು, ಈ ವೇಳೆ ರುದ್ರಪಾರಾಯಣದ ದೀಪ ಪ್ರಜ್ವಲನೆಯನ್ನು ನೆರವೇರಿಸಿದರು. ಇದೇ ಸಂದರ್ಭ, ಯಾಗದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಯಾಗ ಸಮಿತಿ ಗೌರವಾಧ್ಯಕ್ಷ ರಘುನಾಥ್ ಸೋಮಯಾಜಿ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ, ಪ್ರಮುಖರಾದ ಸಂತೋಷ್ ಶೆಟ್ಟಿ ಅರೆಬೆಟ್ಟು, ಶಂಕರನಾರಾಯಣ ಭಟ್ ಕೆಲಿಂಜ, ಯುವಕ ಮಂಡಲ ಬಾಳ್ತಿಲ, ಓಡಿಯೂರು ಶ್ರೀ ಗ್ರಾಮ ವಿಕಾಸ ಕಲ್ಲಡ್ಕ ಘಟಕದ ಸದಸ್ಯರು, ಶಂಭುಗ ಫ್ರೆಂಡ್ಸ್ ಶಂಭುಗ, ಯಾಗ ಸಮಿತಿ ಸದಸ್ಯರು, ಮುಖಂಡರು ಹಾಗೂ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ನಿಟಿಲಾಕ್ಷ ಸದಾಶಿವ ದೇವಸ್ಥಾನಕ್ಕೆ ಕದ್ರಿ ಶ್ರೀ ನಿರ್ಮಲನಾಥಜೀ ಮಹಾರಾಜ್ ಭೇಟಿ"
Be the first to comment on "ನಿಟಿಲಾಕ್ಷ ಸದಾಶಿವ ದೇವಸ್ಥಾನಕ್ಕೆ ಕದ್ರಿ ಶ್ರೀ ನಿರ್ಮಲನಾಥಜೀ ಮಹಾರಾಜ್ ಭೇಟಿ"