ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರು ಬಂಟ್ವಾಳ ಪುರಸಭೆಯ ಘನತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ತ್ಯಾಜ್ಯ ಮರುಬಳಕೆ ಘಟಕಕ್ಕೆ ಭೇಟಿ ನೀಡಿದರು.
ಕಂಚಿನಡ್ಕಪದವಿನಲ್ಲಿರುವ ಈ ಘಟಕದಲ್ಲಿ ಹಸಿತ್ಯಾಜ್ಯದಿಂದ ತಯಾರಿಸಿರುವ ಗೊಬ್ಬರ, ಹಸಿತ್ಯಾಜ್ಯದಿಂದ ತಯಾರಿಸಲು ಉದ್ಧೇಶಿಸಿರುವ ಬಯೋಗ್ಯಾಸ್ ತಯಾರಿ ಘಟಕ ಮತ್ತು ಒಣತ್ಯಾಜ್ಯದಿಂದ ಮರುಬಳಕೆ, ಮರುಉಪಯೋಗಕ್ಕೆ ಯೋಗ್ಯವಾದ ವಸ್ತುಗಳನ್ನು ವಿಂಗಡಿಸಿ ಸಂಗ್ರಹಿಸಿಡುವುದು, ಆರ್.ಡಿ.ಎಫ್. ಸಿಮೆಂಟ್ ಕಾರ್ಖಾನೆಗೆ ಕಳುಹಿಸಲು ಸಂಗ್ರಹಿಸಿರುವುದನ್ನು ಪರಿಶೀಲಿಸಿ, ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭೇಟಿಯ ಸಂದರ್ಭ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಾದ ರವಿಚಂದ್ರ ನಾಯ್ಕ್, ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಎಂ.ಡಿ ರಾಜು.ಕೆ, ಬಂಟ್ವಾಳ ಪುರಸಭೆಯ ಅಧ್ಯಕ್ಷರಾದ ಬಿ. ವಾಸು ಪೂಜಾರಿ ಲೊರೆಟ್ಟೊ, ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಸಮುದಾಯ ಸಂಘಟಕರಾದ ಉಮಾವತಿ, ಪುರಸಭೆಯ ಒಣತ್ಯಾಜ್ಯ ನಿರ್ವಹಣೆಯ ಅಭಿಲಾಷ್ ಮತ್ತು ಪುರಸಭಾ ಸಿಬ್ಬಂದಿಳು ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ಪುರಸಭೆ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಭೇಟಿ"