ಮಂಗಳೂರಿನ ವೆನ್ಲಾಕ್ ನಲ್ಲಿ ತಜ್ಞ ವೈದ್ಯರಾಗಿರುವ ಡಾ. ದಿನೇಶ್ ಕಾಮತ್ ಮತ್ತು ಬಿ.ಸಿ.ರೋಡಿನಲ್ಲಿ ಮಕ್ಕಳ ತಜ್ಞ ವೈದ್ಯರಾಗಿರುವ ಡಾ. ಅನುರಾಧಾ ಕಾಮತ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಇಬ್ಬರೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಕರಾಗಲು ಹೊರಟಿದ್ದಾರೆ. ಇಂದು ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ಅಮೂಲ್ಯ ಕಾಮತ್ 599 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದರೆ, 2019ರಲ್ಲಿ ಈಕೆಯ ಅಕ್ಕ ಅನುಪಮಾ ಕಾಮತ್ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದಳು
ಮಂಗಳೂರಿನ ಎಕ್ಸ್ ಪರ್‍ಟ್ ವಿದ್ಯಾಸಂಸ್ಥೆಯಲ್ಲಿ ಕಲಿತಿರುವ ಅಮೂಲ್ಯ ಕಾಮತ್ ಗಳಿಸಿದ ಅಂಕಗಳು ಹೀಗಿವೆ. ಇಂಗ್ಲೀಷ್ 99, ಸಂಸ್ಕೃತ 100, ಫಿಸಿಕ್ಸ್ 100, ಕೆಮಿಸ್ಟ್ರಿ 100, ಮೆಥಮೆಟಿಕ್ಸ್ 100, ಕಂಪ್ಯೂಟರ್ ಸೈನ್ಸ್ 100. ಒಟ್ಟು 599.ಮೊದಲು ಬಂಟ್ವಾಳದ ಬಿ.ಸಿ.ರೋಡಿನ ಕೈಕುಂಜೆಯಲ್ಲಿ ವಾಸವಾಗಿದ್ದ ವೈದ್ಯದಂಪತಿ ಇದೀಗ ಮಂಗಳೂರಿನಲ್ಲಿ ವಾಸವಾಗಿದ್ದಾರೆ.
Be the first to comment on "ಅಕ್ಕ ಎಸ್ಸೆಸ್ಸೆಲ್ಸಿಯಲ್ಲಿ ಎರಡನೇ ರ್‍ಯಾಂಕ್ , ತಂಗಿ ಪಿಯುಸಿಯಲ್ಲಿ ರಾಜ್ಯಕ್ಕೇ ಪ್ರಥಮ"