ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಯಲ್ಲಿ ಏ.೪ರಿಂದ ೯ರವರೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಗುರುವಾರ ಸಂಜೆ ಚಾಲನೆ ನೀಡಲಾಯಿತು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ ಬಿ.ಸಿ.ರೋಡ್ ಕೈಕಂಬದ ಪೊಳಲಿ ದ್ವಾರದ ಬಳಿ ಹಸಿರುವಾಣಿ ಮೆರವಣಿಗೆಗೆ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಊರ, ಪರವೂರ ದಾನಿಗಳ ಹಾಗೂ ಸಂಘ, ಸಂಸ್ಥೆಗಳ ಸಹಕಾರದಿಂದ ಸಂಗ್ರಹಿತ ಸುವಸ್ತುಗಳನ್ನು ವಿವಿಧ ವಾದ್ಯಘೋಷಗಳಿಂದ ಹಾಗೂ ಕುಣಿತ ಭಜನೆಗಳೊಂದಿಗೆ ಕ್ಷೇತ್ರಕ್ಕೆ ತರಲಾಯಿತು. ಅಕ್ಕಿ, ಬೆಲ್ಲ, ಬೇಳೆಕಾಳುಗಳು, ತೆಂಗಿನಕಾಯಿ,ತರಕಾರಿ, ಅಡಕೆಗೊನೆ, ಸೀಯಾಳ ಗೊನೆ, ಬಾಳೆಗೊನೆ, ಹಿಂಗಾರ, ಸಕ್ಕರೆ, ಕಬ್ಬು, ದರ್ಬೆ, ಹಾಳೆತಟ್ಟೆ ಸಹಿತ ಹಲವು ವಸ್ತುಗಳನ್ನು ಹೊತ್ತ ವಾಹನಗಳು ಮೆರವಣಿಗೆಯಲ್ಲಿದ್ದವು.
ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ, ಧಾರ್ಮಿಕ ಪರಿಷತ್ ಜಿಲ್ಲಾ ಸಮಿತಿ ಸದಸ್ಯ ದೇವಪ್ಪ ಕುಲಾಲ್, ಶ್ರೀ ರಕ್ತೇಶ್ವರಿ ದೇವಿ ಸನ್ನಿ ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಸಹಕಾರ್ಯಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಹೊರೆಕಾಣಿಕೆ ಸಮಿತಿ ಸಂಚಾಲಕರಾದ ಬೇಬಿ ಕುಂದರ್, ದೇವದಾಸ ಶೆಟ್ಟಿ, ಸಹಸಂಚಾಲಕರಾದ ಚಂದ್ರಹಾಸ ಪಲ್ಲಿಪ್ಪಾಡಿ, ಲೋಕೇಶ ಸುವರ್ಣ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಸಾದ್ ಕುಮಾರ್ ರೈ, ಉಮೇಶ್ ಕುಮಾರ್ ವೈ, ಪ್ರಧಾನ ಕಾರ್ಯದರ್ಶಿ ಐತಪ್ಪ ಪೂಜಾರಿ, ಕೋಶಾಕಾರಿ ಕೆ. ನಾರಾಯಣ ಹೆಗ್ಡೆ, ಸಹಕೋಶಾಕಾರಿ ವಸಂತ ರಾವ್, ಶ್ರೀ ರಕ್ತೇಶ್ವರಿ ದೇವಿ ಸನ್ನಿ ಕಾರ್ಯದರ್ಶಿ ಎನ್.ಶಿವಶಂಕರ್, ಕೋಶಾಕಾರಿ ಬಿ.ಮೋಹನ್, ಸದಸ್ಯರಾದ ಗೋಪಾಲ ಸುವರ್ಣ, ಬಿ.ರಾಮಚಂದ್ರ ನಾಯಕ್, ರಾಜೇಶ್ ಎಲ್. ನಾಯಕ್, ಸೋಮನಾಥ ನಾಯ್ಡು, ಶ್ರೀಧರ ಮಲ್ಲಿ, ಅಶ್ವನಿ ಕುಮಾರ್ ರೈ, ರಮೇಶ್ ಸಾಲ್ಯಾನ್, ಸತೀಶ್ ಕುಮಾರ್, ಪ್ರಮೋದ್ ಕುಮಾರ್, ಪದ್ಮನಾಭ ಆಚಾರ್ಯ, ಅರ್ಚಕ ರಘುಪತಿ ಭಟ್, ಪ್ರಮುಖರಾದ ಪದ್ಮಶೇಖರ ಜೈನ್, ಸಹಿತ ನಾನಾ ಸಮಿತಿಗಳ ಪ್ರಮುಖರಾದ ಸದಾಶಿವ ಕೈಕಂಬ, ಸುರೇಶ್ ಕುಮಾರ್ ಕೈಕಂಬ, ಸತೀಶ್ ಶೆಟ್ಟಿ ಮೊಡಂಕಾಪು,ಚಿತ್ತರಂಜನ ಶೆಟ್ಟಿ ಬೊಂಡಾಲ, ಇಂದಿರೇಶ್, ಪ್ರಣಾಮ್ ಅಜ್ಜಿಬೆಟ್ಟು, ಕಿಶೋರ್ ಕುಮಾರ್, ಸುಷ್ಮಾ ಚರಣ್, ಸವಿತ ಜಗನ್ನಾಥ ಶೆಟ್ಟಿ, ಶ್ರೀವತ್ಸ ಭಟ್, ಚಂದ್ರಶೇಖರ ಕುಲಾಲ್, ಶಶಿಧರ ಭಟ್, ಪುಷ್ಪರಾಜ ಶೆಟ್ಟಿ ಸಹಿತ ಪದಾಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
Be the first to comment on "ರಕ್ತೇಶ್ವರಿ ದೇವಿ ಸನ್ನಿಧಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಆರಂಭ: ಅದ್ದೂರಿ ಮೆರವಣಿಗೆ"