ಮೊಗರ್ನಾಡು ಸಾವಿರ ಸೀಮೆಯ ಒಡೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ವಠಾರದಲ್ಲಿ ಜರಗಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ 3ನೇ ದಿನವಾದ ಮಂಗಳವಾರ ಶ್ರೀ ದೇವರಿಗೆ ಅತಿಮಹಾರುದ್ರ ಪಾರಾಯಣಕ್ಕೆ ನಿವೃತ್ತ ಶಿಕ್ಷಕ ಬಟ್ಯಪ್ಪ ಮಾಸ್ಟರ್ ನೆಟ್ಲ ಚಾಲನೆ ನೀಡಿದರು.
ಪ್ರತಿನಿತ್ಯ ಶ್ರೀ ಕ್ಷೇತ್ರದಲ್ಲಿ ಈ ಪಾರಾಯಣ ಮೇ 4 ರಂದು ನಡೆಯುವ ಯಾಗದವರೆಗೂ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ನಿತ್ಯ ಅನ್ನದಾನವೂ ನಡೆಯುತ್ತದೆ. ವಾರಾಣಾಸಿ ಕಾಶಿಮಠ ಶ್ರೀಮದ್ ಕಾಶಿಜ್ಞಾನ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಾರ್ಥ ಈ ಯಾಗ ನಡೆಯಲಿದೆ. ಚಿತ್ರದುರ್ಗದ ಬಹ್ಮಾನಂದ ರೆಡ್ಡಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಹಿರಿಯರಾದ ಬಟ್ಯಪ್ಪ ಮಾಸ್ಟರ್ ನೆಟ್ಲಾ ದೀಪ ಬೆಳಗಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಗೌರವಧ್ಯಕ್ಷರಾದ ರಘುನಾಥ ಸೋಮಯಾಜಿ, ಕಾರ್ಯಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆ, ಮಾಣಿ ಇತರ ಗಣ್ಯರು ಹಾಗೂ ಕ್ಷೇತ್ರದ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.
Be the first to comment on "ನೆಟ್ಲದಲ್ಲಿ ಅತಿಮಹಾರುದ್ರ ಪಾರಾಯಣ: 3ನೇ ದಿನದ ಕಾರ್ಯಕ್ರಮಕ್ಕೆ ಚಾಲನೆ"