
https://www.opticworld.net/
VIDEO:
ಮಹಾಶಿವರಾತ್ರಿ ಪ್ರಯುಕ್ತ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗ ದರ್ಶನ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗ, ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಸಮೀಪ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಭಾನುವಾರ ಆರಂಭಗೊಂಡಿದೆ. ಈ ಅವಕಾಶ ಫೆ.28ರ ರಾತ್ರಿ 8ರವರೆಗೆ ಇರಲಿದ್ದು, ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಇಲ್ಲಿ ಸಾರ್ವಜನಿಕರು ಆಗಮಿಸಿ ಉಚಿತವಾಗಿ ಪ್ರದರ್ಶನ ವೀಕ್ಷಿಸಬಹುದು. ಮಾಹಿತಿಯನ್ನು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ವಯಂಸೇವಕರು ನೀಡುತ್ತಾರೆ ಎಂದು ರಾಜಯೋಗಿನಿ ಬ್ರಹ್ಮಾಕುಮಾರಿ ಸಾವಿತ್ರಿ ಹಾಗೂ ರಾಜಯೋಗಿ ಬ್ರಹ್ಮಾಕುಮಾರ ಗಣಪತಿ ಅವರು ತಿಳಿಸಿದ್ದಾರೆ. ಸೋಮನಾಥ, ಮಲ್ಲಿಕಾರ್ಜುನ, ಮಹಾಕಾಲೇಶ್ವರ, ಓಂಕಾರೇಶ್ವರ, ವೈದ್ಯನಾಥ, ಭೀಮಾಶಂಕರ, ರಾಮೇಶ್ವರ, ನಾಗೇಶ್ವರ, ವಿಶ್ವನಾಥ, ತ್ರಯಂಭಕೇಶ್ವರ, ಕೇದಾರನಾಥ, ಗ್ರೀಷ್ಣೇಶ್ವರ ಹೀಗೆ 12 ಜ್ಯೋತಿರ್ಲಿಂಗಗಳ ಪ್ರತಿಕೃತಿಯನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಆಧ್ಯಾತ್ಮ ಶಕ್ತಿಯ ವಿಕಸನದಿಂದ ಮನುಷ್ಯ ಪ್ರಗತಿಶೀಲನಾಗಲು ಸಾಧ್ಯ ಎಂದು ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಹಾಗೂ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಬಳಿ ಶಿವರಾತ್ರಿ ಹಿನ್ನೆಲೆಯಲ್ಲಿ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಅತಿಥಿಗಳಾಗಿ ಭಾಗವಹಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ದೇವನು ಒಬ್ಬನೇ ಎಂದು ಹೇಳಿದರೂ ನಮ್ಮ ದೇವರು ಬೇರೆ, ನಿಮ್ಮ ದೇವರು ಬೇರೆ ಎಂಬ ಭಿನ್ನಾಭಿಪ್ರಾಯವನ್ನು ತಳೆಯುವವರು ಇರುವ ಈ ಹೊತ್ತಿನಲ್ಲಿ ಇಂಥ ಕಾರ್ಯಕ್ರಮಗಳು ಪ್ರಸ್ತುತವಾಗಿದೆ ಎಂದರು.
ಶಂಭೂರು ಸರಕಾರಿ ಪ್ರೌಢಶಾಲೆ ಕಾರ್ಯಾಧ್ಯಕ್ಷ, ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಅಧ್ಯಕ್ಷ ಬಿ.ವಿಶ್ವನಾಥ್, ಯೆನೆಪೊಯ ಯುನಿವರ್ಸಿಟಿಯ ಪ್ರೊ.ಡಾ. ಬಾಲಕೃಷ್ಣ ಕಲ್ಲೂರಾಯ, ಚಿಣ್ಣರಲೋಕ ಮೋಕೆದ ಕಲಾವಿದರ್ ಸೇವಾ ಟ್ರಸ್ಟ್ ಸಂಚಾಲಕ ಮೋಹನದಾಸ ಕೊಟ್ಟಾರಿ ಹಾಗೂ ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು ಶುಭ ಹಾರೈಸಿದರು. ಪೈಯನ್ನೂರು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯ ಸಂಚಾಲಕಿ ರಾಜಯೋಗಿನಿ ಶಾಂತಾ ಸಂದೇಶ ನೀಡಿ ನಮ್ಮ ನೆಗೆಟಿವಿಟಿಯನ್ನು ಬಿಟ್ಟುಬಿಡುವುದೆಂದೇ ಪರಮಾತ್ಮನೆಡೆ ಸಾಗುವುದು ಎಂದರು. ಬಂಟ್ವಾಳದ ಸಂಚಾಲಕಿ ಬ್ರಹ್ಮಾಕುಮಾರಿ ಸಾವಿತ್ರಿ ಸ್ವಾಗತಿಸಿದರು. ಸಂಯೋಜಕ ಬ್ರಹ್ಮಾಕುಮಾರ ಗಣಪತಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ 12 ಜ್ಯೋತಿರ್ಲಿಂಗದ ಪ್ರತಿಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದ್ದು, 28ರವರೆಗೆ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ನಡೆಯಲಿದೆ.
Be the first to comment on "ಶಿವರಾತ್ರಿ ಹಿನ್ನೆಲೆ: ಬಿ.ಸಿ.ರೋಡ್ ನಲ್ಲಿ ಜ್ಯೋತಿರ್ಲಿಂಗ ದರ್ಶನ"