‘

https://www.opticworld.net/
ರಾಜ್ಯ ಸರಕಾರದ 2024-25ನೇ ಸಾಲಿನ ಕೃಷಿ ಪರಿಕರಗಳು ಮತ್ತು ಗುಣನಿಯಂತ್ರಣ ಯೋಜನೆಯಡಿ, ಶೇ.50ರ ಸಹಾಯಧನದಲ್ಲಿ ಒಟ್ಟು 27.25 ಲಕ್ಷ ರೂ ಅನುದಾನದಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್ ಕಾರ್ಯಕ್ರಮದಡಿ, ಹಾರ್ವೆಸ್ಟರ್ ಹಬ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲನೆಯದ್ದಾಗಿ ಬಂಟ್ವಾಳ ತಾಲೂಕಿನಲ್ಲಿ ಸ್ಥಾಪನೆಯಾಗಲಿದೆ. ಬಂಟ್ವಾಳ ಕಸ್ಬಾ ಗ್ರಾಮದ ಮೇತಿಕೆದು ನಿವಾಸಿ ಪಶುಪತಿ ಗೌಡ ಅವರಿಗೆ 2 ಕಂಬೈನ್ಡ್ ಭತ್ತ ಕಟಾವು ಯಂತ್ರ ಹಾಗೂ 3 ಭತ್ತ ಹುಲ್ಲು ಕಂತೆ ಮಾಡುವ ಬೇಲರ್ ಯಂತ್ರಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮಂಗಳವಾರ ಬಂಟ್ವಾಳ ಬಿ.ಸಿ.ರೋಡಿನ ಕೃಷಿ ಇಲಾಖೆ ಕಚೇರಿ ಸಮೀಪ ವಿತರಿಸಿದರು.
ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ ಶೇ.90ರ ಸಹಾಯಧನದಲ್ಲಿ 11 ಮಂದಿ ರೈತರಿಗೆ ತುಂತುರು ನೀರಾವರಿ ಘಟಕಗಳನ್ನು, ಕೇಂದ್ರ ಕೃಷಿ ಯಂತ್ರೋಪಕರಣ ಉಪ ಅಭಿಯಾನ ಯೋಜನೆಯಡಿ 7 ರೈತರಿಗೆ ಪವರ್ ವೀಡರ್ ಮತ್ತು ಓರ್ವ ಫಲಾನುಭವಿಗೆ ಶೇ.50ರ ಸಹಾಯಧನದಲ್ಲಿ ಪವರ್ ಸ್ಪ್ರೇಯರ್ ಅನ್ನು ಇದೇ ವೇಳೆ ವಿತರಿಸಲಾಯಿತು.ಮಂಗಳೂರು ಉಪವಿಭಾಗದ ಉಪಕೃಷಿ ನಿರ್ದೇಶಕರಾದ ಕುಮುದಾ, ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೆ.ಆರ್, ಕೃಷಿ ಅಧಿಕಾರಿ ನಂದನ್ ಶೆಣೈ ಪಿ ಉಪಸ್ಥಿತರಿದ್ದರು.
Be the first to comment on "ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆ: ಶೇ.50ರ ಸಹಾಯಧನದಲ್ಲಿ ಯಂತ್ರೋಪಕರಣ ವಿತರಣೆ"