
https://www.opticworld.net/
ಶಿಕ್ಷಣ ಫೌಂಡೇಶನ್, ಡೆಲ್ ಟೆಕ್ನಾಲಜೀಸ್ ಸಂಸ್ಥೆ ಸಹಕಾರದೊಂದಿಗೆ ಕರ್ನಾಟಕದಾಧ್ಯಂತ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿ ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳಿಗೆ ಡಿಜಿಟಲ್ ಸಾಧನಗಳನ್ನು ವಿತರಣೆ ಮಾಡಲಾಗುತ್ತಿದೆ.. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೇರಿದಂತೆ ಸಮುದಾಯದ ಜನರ ಡಿಜಿಟಲ್ ಕೌಶಲ್ಯ ವೃದ್ಧಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪುಗೊಂಡಿದೆ. ಈ ನಿಟ್ಟಿನಲ್ಲಿ 2024-25ನೇ ಸಾಲಿನ ಡಿಜಿಟಲ್ ಸಾಧನ ವಿತರಣಾ ಕಾರ್ಯಕ್ರಮ ನಡೆಸಲಾಯಿತು. ಬಂಟ್ವಾಳ ತಾಲೂಕಿನ ಮಾಣಿ, ಮಾಣಿಲ, ಮಣಿನಾಲ್ಕೂರು, ಇರ್ವತ್ತೂರು, ಸಜಿಪಮುನ್ನೂರು ಗ್ರಂಥಾಲಯಗಳಿಗೆ ಡೆಲ್ ಡೆಸ್ಕ್ ಟಾಪ್ ಕಂಪ್ಯೂಟರ್ ಹಾಗೂ ಮೊಬೈಲ್ ಫೋನ್ ವಿತರಿಸಲಾಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಡಿಜಿಟಲ್ ಸಾಧನ ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕಿ ಸುಮತಿ, ಸಂಬಂಧಪಟ್ಟ ಪಂಚಾಯಿತ್ ಅಭಿವೃದ್ಧಿ ಅಧಿಕಾರಿಗಳು, ಗ್ರಂಥಾಲಯ ಮೇಲ್ವಿಚಾರಕರು, ಹಾಗೂ ತಾಲೂಕ ಪಂಚಾಯತಿ ವಿಷಯ ನಿರ್ವಾಹಕ ಅಶೋಕ್ ಕುಮಾರ್ ಉಪಸ್ಥಿತರಿದ್ದರು.
Be the first to comment on "ಡಿಜಿ ವಿಕಸನ ಕಾರ್ಯಕ್ರಮ: ಗ್ರಾಪಂಗಳ ಅರಿವು ಕೇಂದ್ರಗಳಿಗೆ ಡಿಜಿಟಲ್ ಸಾಧನ ವಿತರಣೆ"