ಬಿ.ಸಿ.ರೋಡ್ ಹಾಗೂ ಪಂಪ್‌ವೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಟೆಕ್ನಿಕಲ್ ಆ್ಯಂಡ್ ಪ್ರೊಫೆಶನಲ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಬಂಟ್ವಾಳದ ಎಸ್‌ವಿಎಸ್ ಕ್ರೀಡಾಂಗಣದಲ್ಲಿ ನಡೆಯಿತು.
ಬಂಟ್ವಾಳ ಪುರಸಭೆ ಅಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡಾಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡಾಗ ಬೆಳವಣಿಗೆಗೆ ಶಕ್ತಿ ದೊರೆಯುತ್ತದೆ ಎಂದರು.

https://www.opticworld.net/
ಪುರಸಭೆ ಮುಖ್ಯ ಅಧಿಕಾರಿ ರೇಖಾ ಜೆ.ಶೆಟ್ಟಿ ಮಾತನಾಡಿ, ಟೆಕ್ನಿಕಲ್ ಆಂಡ್ ಪ್ರೊಫೆಶನಲ್ ಕೋರ್ಸ್‌ಗಳ ಮೂಲಕ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗುವ ಮೈಟ್ ಸಂಸ್ಥೆ ಕ್ರೀಡಾಚಟುವಟಿಕೆ ನಡೆಸುವ ಮೂಲಕ ವಿದ್ಯಾರ್ಥಿಗಳ ವಿಕಸನಕ್ಕೆ ಬೆಳಕಾಗಿದೆ ಎಂದರು.
ಬಂಟ್ವಾಳ ಪುರಸಭೆ ಸದಸ್ಯ ಹರಿಪ್ರಸಾದ್ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಕ್ರೀಡೆ ಸಹಿತ ವಿವಿಧ ಚಟುವಟಿಕೆಗಳು ಅಗತ್ಯವಾಗಿ ಬೇಕಿದೆ. ಅದು ವಿದ್ಯಾರ್ಥಿಗಳ ಬದುಕಿಗೆ ಆಧಾರ ಎಂದರು.
ಮೈಟ್ ಟೆಕ್ನಿಕಲ್ ಆ್ಯಂಡ್ ಪ್ರೊಫೆಶನಲ್ ಕಾಲೇಜಿನ ಸ್ಥಾಪಕ ಅಧ್ಯಕ್ಷ ರಾಕೇಶ್ ಕುಮಾರ್, ನಿರ್ದೇಶಕರಾದ ನಿಶ್ಮಿತಾ ರಾಕೇಶ್, ಹಿರಿಯ ಉಪನ್ಯಾಸಕ ಮಹಮ್ಮದ್ ಅಶ್ರಫ್ ಉಪಸ್ಥಿತರಿದ್ದರು. ಉಪನ್ಯಾಸಕಿ ಗೀತಾ ಸ್ವಾಗತಿಸಿದರು. ಉಪನ್ಯಾಸಕಿ ಸುಷ್ಮಾ ಮನೋಜ್ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕಿ ಪ್ರೀಮಲ್ ಪ್ರಮಾಣ ವಚನ ಬೋಧಿಸಿದರು.
Be the first to comment on "ಮೈಟ್ ಟೆಕ್ನಿಕಲ್ ಆ್ಯಂಡ್ ಪ್ರೊಫೆಶನಲ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ"