ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟುವಿನಲ್ಲಿ ನೀರು ಸಂಗ್ರಹಣೆಗಾಗಿ ಗೇಟ್ ಅಳವಡಿಸಿದ ಪರಿಣಾಮವಾಗಿ, ಸ್ಥಳೀಯ ಕೃಷಿಕರ ತೋಟಗಳಿಗೆ ನೀರು ನುಗ್ಗಿದ ಹಿನ್ನೆಲೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸ್ಥಳಕ್ಕೆ ಭೇಟಿ ನೀಡಿ ಗೇಟ್ ತೆರವುಗೊಳಿಸಲು ಸೂಚನೆ ನೀಡಿದರು.

https://www.opticworld.net/
ಅಣೆಕಟ್ಟಿನ ಎಲ್ಲ ಗೇಟ್ ಗಳನ್ನು ಮುಚ್ಚಿ ಸುಮಾರು 5 ಮೀಟರ್ ನಷ್ಟು ನೀರು ಶೇಖರಣೆಯಾದ ಹಿನ್ನೆಲೆ ಸಮೀಪದ ಪಣೆಕಳ, ಮಣಿಹಳ್ಳ ಪ್ರದೇಶಗಳಿಗೆ ನೀರು ನುಗ್ಗಿದ್ದಾಗಿ ಕೃಷಿಕರು ದೂರಿದ್ದರು. ಈ ವಿಷಯದ ಕುರಿತು ಮಂಗಳೂರಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದ ಕೆಡಿಪಿ ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಪ್ರಸ್ತಾಪಿಸಿದ್ದರು. ಮಂಗಳೂರಿನ ಸಭೆ ಮುಗಿದ ಬಳಿಕ ಕಿಂಡಿ ಅಣೆಕಟ್ಟಿನ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಗೇಟ್ ತೆರವಿಗೆ ಸೂಚನೆ ನೀಡಿದರು. ಅದರಂತೆ ಏಳು ಗೇಟ್ ಗಳನ್ನು ತೆರವು ಮಾಡಲಾಯಿತು.
Be the first to comment on "ಜಕ್ರಿಬೆಟ್ಟು ಡ್ಯಾಂ ನೀರು ಸಂಗ್ರಹದಿಂದ ತೋಟಗಳಿಗೆ ನೀರು: ಗೇಟ್ ತೆರವುಗೊಳಿಸಲು ಶಾಸಕ ರಾಜೇಶ್ ನಾಯ್ಕ್ ಸೂಚನೆ"