ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣ ಘಟಕದ ಕಲ್ಲಡ್ಕ ಘಟಕ ವತಿಯಿಂದ ಇದರ ವತಿಯಿಂದ ಶ್ರಮದಾನ ಸೇವಾ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ನಾರಂಕೋಡಿ ಅಂಗನವಾಡಿ ಕೇಂದ್ರದಲ್ಲಿ ಜರಗಿತು.
ಅಂಗನವಾಡಿ ಕೇಂದ್ರದಿಂದ ಕಲ್ಲಡ್ಕ ಶೌರ್ಯ ವಿಪತ್ತು ಘಟಕಕ್ಕೆನೀಡಿದ ಮನವಿಗೆ ಸ್ಪಂದಿಸಿ ಘಟಕದ ಸದಸ್ಯರು ಕೇಂದ್ರದ ಸುತ್ತ ಪರಿಸರ ಸ್ವಚ್ಛ ಕಾರ್ಯ ಮಾಡಿದರು.ಸ್ವಚ್ಛತಾ ಕಾರ್ಯಕ್ರಮದ ಸಂದರ್ಭ ಬೋಳಂತೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಶೀರ್ ಭೇಟಿ ನೀಡಿ ಪ್ರೊಸ್ತಾಹಿಸಿದರು.
ಶ್ರಮದಾನ ಸೇವಾ ಕಾರ್ಯದಲ್ಲಿ ಕಲ್ಲಡ್ಕ ಶೌರ್ಯ ಘಟಕ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರಬೆಟ್ಟು, ಘಟಕದ ಸಂಯೋಜಕಿ ವಿದ್ಯಾಬೊಂಡಲಾ, ಸದಸ್ಯರುಗಳಾದ ತುಳಸಿ, ಸಂತೋಷ್ ಬೊಲ್ಪೊಡಿ ,ಸತೀಶ್,ಗಣೇಶ್,ಚಿನ್ನಾ ಕಲ್ಲಡ್ಕ, ಮೊದಲಾದವರು ಭಾಗವಹಿಸಿದ್ದರು. ಶ್ರಮದಾನದ ಬಲಿಕ ತಿಂಗಳ ಮಾಸಿಕ ಸಭೆ ನಡೆಸಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.
Be the first to comment on "ಕಲ್ಲಡ್ಕದ ಶೌರ್ಯ ವಿಪತ್ತು ನಿರ್ವಹಣ ಘಟಕದಿಂದ ಶ್ರಮದಾನ"