ಫರಂಗಿಪೇಟೆ: ತಾಲೂಕು ಕಳ್ಳಿಗೆ ಗ್ರಾಮದ ಬೆಂಜನಪದವಿನ ರಾಮನಗರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ (ರಿ.)ಇದರ ಅಶ್ರಯದಲ್ಲಿ ನಿರ್ಮಿಸಲಾದ ನೂತನ ಅಯ್ಯಪ್ಪ ಮಂದಿರದ ಲೋಕಾರ್ಪಣೆ ಹಾಗೂ ಶ್ರೀ ದೇವರ ಪ್ರತಿಷ್ಠಾ ಬ್ರಹ್ಮಕಲಶವು ಹೆಚ್. ಶಂಕರ ಭಟ್ ಇವರ ನೇತೃತ್ವದಲ್ಲಿ ಹಾಗೂ ವೇ.ಮೂ. ಸತ್ಯೇಶ್ ಭಟ್ ಇವರ ಪೌರೋಹಿತ್ಯದಲ್ಲಿ ಜ.19ರಂದು ಆದಿತ್ಯವಾರ ಬೆಳಗ್ಗೆ ಬೆಂಜನ ಪದವಿನ ರಾಮನಗರದಲ್ಲಿ ನಡೆಯಿತು.
ಮದ್ಯಾಹ್ನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಬೆಂಜನಪದವು ಶ್ರೀ ಭದ್ರಾಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ ವಹಿಸಿ ಮಾತನಾಡಿ ಪುಸ್ತಕ ಹಾಗೂ ಮಸ್ತಕವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡರೆ ಸಂತೋಷದ ಜೀವನ ನಡೆಸಲು ಸಾಧ್ಯ, ಯೋಗ ಭಾಗ್ಯವಿದ್ದರೆ ಭಗವಂತನ ಸೇವೆಯಲ್ಲಿ ಸಂತೃಪ್ತಿ ಕಾಣಬಹುದು ಎಂದು ಹೇಳಿದರು.
ವೇದಿಕೆಯಲ್ಲಿ ಕರಿಯಂಗಳ ಗ್ರಾ ಪಂ ನಿಕಟ ಪೂರ್ವ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ತಡ್ಯ ಭ್ರಮಾರಾಂಬಿಕೆ ಕ್ಷೇತ್ರದ ಧರ್ಮದರ್ಶಿ ಪ್ರಾಣೇಶ್ ಅತ್ತಾವರ, ಭುವಿ ಇಂಡಸ್ಟ್ರೀಸ್ ಮಾಲೀಕ, ಸಾಮಾಜಿಕ ಕಾರ್ಯಕರ್ತ ಸಂತೋಷ್ ಕುಮಾರ್ ನೆತ್ತರಕೆರೆ,ಹಿಂದೂ ಮುಖಂಡ ಸಚಿನ್ ಮಣಿಕಂಠಪುರ, ಕಳ್ಳಿಗೆ ಗ್ರಾ ಪಂ ಸದಸ್ಯೆ ರೇಷ್ಮಾ ಸತೀಶ್, , ಶಿಲ್ಪಿ ಚಂದ್ರಶೇಖರ್ ಲಮಾಣಿ, ಕಿರಣ್ ಪಕ್ಕಳ, ಗುಣಕರ ಗುರುಸ್ವಾಮಿ, ಶಿವರಾಜ್ ರಾಮನಗರ,ಅಯ್ಯಪ್ಪ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರವೀಣ್ ಬೆಂಜನಪದವು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೆಂಜನಪದವು ಶ್ರೀ ಭದ್ರಾಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ ಹಾಗೂ ತಡ್ಯ ಭ್ರಮಾರಾಂಬಿಕೆ ಕ್ಷೇತ್ರದ ಧರ್ಮದರ್ಶಿ ಪ್ರಾಣೇಶ್ ಅತ್ತಾವರ ಅವರನ್ನು ಸನ್ಮಾನಿಸಲಾಯಿತು.ಕಿಶೋರ್ ಭಂಡಾರಿ ಬೆಳ್ಳೂರು ಸ್ವಾಗತಿಸಿ, ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಧನ್ಯವಾದವಿತ್ತು ಕಾರ್ಯಕ್ರಮ ನಿರೂಪಿಸಿದರು. ಸುಬ್ರಮಣ್ಯ ಭಟ್ ಹಾಗೂ ಮನೋಜ್ ಶರ್ಮ ಸಹಕರಿಸಿದರು.
Be the first to comment on "ಬೆಂಜನಪದವು: ನೂತನ ಅಯ್ಯಪ್ಪ ಮಂದಿರದ ಲೋಕಾರ್ಪಣೆ, ಧಾರ್ಮಿಕ ಸಭಾ ಕಾರ್ಯಕ್ರಮ."