ಬಿ.ಸಿ.ರೋಡ್ ಫ್ಲೈಓವರ್ ಕೆಳಗಿನ ಆಸುಪಾಸಿನಲ್ಲೆಲ್ಲಾ ತರಕಾರಿ, ಹಣ್ಣು, ಮೆಣಸು ಸಹಿತ ಹಲವು ಆಹಾರ ಪದಾರ್ಥಗಳನ್ನು ಹರಡಿ, ಮಾರಾಟ ಮಾಡುವ ಸಂದರ್ಭ ಖರೀದಿಗೆಂದು ಬರುವವರು ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುತ್ತಿರುವ ಬಗ್ಗೆ ಹಾಗೂ ರಸ್ತೆ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕ ದೂರನ್ನು ಆಧರಿಸಿ ಮಾಧ್ಯಮಗಳು ಮಾಡಿದ ವರದಿಗೆ ಪುರಸಭೆ ಸ್ಪಂದಿಸಿದೆ. ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಸೂಚನೆಯಂತೆ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಅವರು ಕಳೆದ ಭಾನುವಾರ ಮಾರಾಟಗಾರರಿಗೆ ಈ ಕುರಿತು ಸೂಚನೆಯನ್ನು ನೀಡಿದ್ದರು. ಅದರನ್ವಯ ಈ ಭಾನುವಾರ ಸಂತೆ ಕೈಕುಂಜ ರಸ್ತೆಗೆ ಶಿಫ್ಟ್ ಆಗಿದೆ. ಭೂಅಭಿವೃದ್ಧಿ ಬ್ಯಾಂಕ್ ಎದುರು ಭಾನುವಾರ ತರಕಾರಿ ವ್ಯಾಪಾರ ಕಂಡುಬಂತು. ಇದನ್ನು ತಾಲೂಕು ಪಂಚಾಯಿತಿ ಕಟ್ಟಡವಿದ್ದ ಜಾಗದಲ್ಲಿ ಸೂಕ್ತವಾದ ಜಾಗವನ್ನು ನೋಡಿ, ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಿ, ಸುರಕ್ಷಿತವಾಗಿ ಹಾಗೂ ಬೀದಿ ಬದಿ ವ್ಯಾಪಾರಕ್ಕೂ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗದಂತೆ ನಡೆಸುವ ಕುರಿತು ಯೋಚನೆಗಳು ನಡೆಯುತ್ತಿವೆ ಎಂದು ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ ತಿಳಿಸಿದ್ದಾರೆ.

ಬಿ.ಸಿ.ರೋಡಿನಲ್ಲಿ ಭಾನುವಾರ ಸಂತೆ
Be the first to comment on "ಫ್ಲೈಓವರ್ ಕೆಳಗಿನಿಂದ ಕೈಕುಂಜೆ ರಸ್ತೆಗೆ ತಾತ್ಕಾಲಿಕವಾಗಿ ಶಿಫ್ಟ್ ಆದ ತರಕಾರಿ ವ್ಯಾಪಾರ — ಅಪಾಯ ಹಾಗೂ ಸುರಕ್ಷಿತ ಜಾಗದ ಅಗತ್ಯ ಕುರಿತು ಬಂಟ್ವಾಳನ್ಯೂಸ್ ಸಹಿತ ಮಾಧ್ಯಮಗಳು ಎಚ್ಚರಿಸಿದ್ದವು"