ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯಿಂದ ಆಲಡ್ಕವಾಗಿ ಮೆಲ್ಕಾರ್ ವರೆಗಿನ ರಸ್ತೆಯ ಪೂರ್ತಿ ಮರುಡಾಮರೀಕರಣ ಹಾಗೂ ಎರಡು ಬದಿಯ ಚರಂಡಿಯ ಹೊಳೆತ್ತುವಂತೆ ಮತ್ತು ದುರಸ್ತಿ ಮಾಡುವಂತೆ ಪಾಣೆಮಂಗಳೂರು 24 ವಾರ್ಡ್ ನ ಪರವಾಗಿ ಸದಸ್ಯ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ ಅವರು ಪಿ.ಡಬ್ಲೂ.ಡಿ.ಇಲಾಖೆಗೆ ಮನವಿ ನೀಡಿದ್ದರು.
ಮನವಿಗೆ ಸ್ವೀಕರಿಸಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಯಪ್ರಕಾಶ್ ಹಾಗೂ ಸಹಾಯಕ ಇಂಜಿನಿಯರ್ ಅರುಣ್ ಪ್ರಕಾಶ್ ಜಂಟಿಯಾಗಿ ಪೇಟೆಯ ರಸ್ತೆಯ ಪರಿಶೀಲನೆ ನಡೆಸಿದರು. ಬಳಿಕ ಪಾಣೆಮಂಗಳೂರು ಆಲಡ್ಕ ಮೆಲ್ಕಾರ್ ರಸ್ತೆಗೆ ಮರುಡಾಮರೀಕರಣ ಹಾಗೂ ಚರಂಡಿಯ ಕಾಮಗಾರಿಗೆ ಸಂಬಂಧಿಸಿದಂತೆ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಪಾಣೆಮಂಗಳೂರು – ಮೆಲ್ಕಾರ್ ವರೆಗೆ ಸುಮಾರು 1.5 ಕಿಮೀ ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಉದ್ದೇಶದಿಂದ ರಸ್ತೆಯ ಗುಂಡಿ ಮುಚ್ಚುವ ಬದಲಿಗೆ ಪೂರ್ತಿ ಡಾಮರೀಕರಣಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಸಂದರ್ಭ ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ, ಪಾಣೆಮಂಗಳೂರು ಭಾಗದ ಪ್ರಮುಖರಾದ ಅಬ್ದುಲ್ ಖಾದರ್ ಬಂಗ್ಲೆಗುಡ್ಡೆ, ಮೋನಕ್ಕ ಮೆಲ್ಕಾರ್, ಇಕ್ಬಾಲ್ ಬಂಗ್ಲೆಗುಡ್ಡೆ, ಅಜಾರ್ ಆಲಡ್ಕ, ಅನ್ಸಾರ್ ಬಂಗ್ಲೆಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಪಾಣೆಮಂಗಳೂರಿನಿಂದ ಮೆಲ್ಕಾರ್ ವರೆಗೆ ರಸ್ತೆ ಅಭಿವೃದ್ಧಿ: ಪುರಸಭಾ ಸದಸ್ಯರ ಮನವಿಗೆ ಸ್ಪಂದಿಸಿ ಅಧಿಕಾರಿಗಳ ಪರಿಶೀಲನೆ"